BIG NEWS| ಬಾಬಾ ಕಾ ಡಾಬಾ ಖ್ಯಾತಿಯ ಕಾಂತಪ್ರಸಾದ್ ಆತ್ಮಹತ್ಯೆಗೆ ಯತ್ನ! ಆಸ್ಪತ್ರೆಗೆ ದಾಖಲು

0
146
Tap to know MORE!

ದೆಹಲಿ(ಜೂ.18): ಬಾಬಾ ಕಾ ಡಾಬಾ ರೆಸ್ಟೋರೆಂಟ್ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿರುವ ಭಾರತೀಯರವರೆಗೂ ಜನಪ್ರಿಯ. ಸಣ್ಣ ಪೆಟ್ಟಿಗೆ ಅಂಗಡಿ ಹೋಟೆಲ್‌ನಿಂದ ದೊಡ್ಡ ರೆಸ್ಟೋರೆಂಟ್ ತೆರೆದ ಬಾಬಾ ಕಾ ಡಾಬಾ ಕಾಂತ ಪ್ರಸಾದ್ ಹಾದಿ ಕುರಿತು ಎಲ್ಲರಿಗೂ ತಿಳಿದಿದೆ. ಯುಟ್ಯೂಬರ್ ಮೂಲಕ ಪ್ರಸಿದ್ದಿಯಾದ ಕಾಂತ ಪ್ರಸಾದ್, ಹೊಸ ರೆಸ್ಟೋರೆಂಟ್ ತೆರೆದಿದ್ದು ಇತಿಹಾಸ. ಬಳಿಕ ಅದೆ ಯ್ಯೂಟೂಬರ್ ಮೇಲೆ ಕೇಸ್ ಹಾಕಿ, ಲಾಕ್‌ಡೌನ್ ಕಾರಣ ರೆಸ್ಟೋರೆಂಟ್ ಕ್ಲೋಸ್ ಮಾಡಿ ಮತ್ತೆ ಪೆಟ್ಟಿಗೆ ಅಂಗಡಿಗೆ ಮರಳಿದ ಕಾಂತ ಪ್ರಸಾದ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಣಾಮ ಆತ್ಯಹತ್ಯೆ ಯತ್ನಿಸಿದ್ದಾರೆ.

ಮಾಳವೀಯ ನಗರ ಠಾಣೆ ಪೊಲೀಸರಿಗೆ ರಾತ್ರಿ ಕರೆಯೊಂದು ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ವೃದ್ಧನೋರ್ವನನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ಕರೆ ಬಂದಿದೆ. ಆಸ್ಪತ್ರೆಗೆ ಆಗಮಿಸಿದ ಪೊಲೀಸರಿಗೆ ಆತ್ಯಹತ್ಯೆಗೆ ಯತ್ನಿಸಿದ ವ್ಯಕ್ತಿ ಬಾಬಾ ಕಾ ಡಾಬ ಕಾಂತ ಪ್ರಸಾದ್ ಅನ್ನೋದು ಸ್ಪಷ್ಟವಾಗಿದೆ. ಸದ್ಯ ಕಾಂತ ಪ್ರಸಾದ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

Zomato ಪಟ್ಟಿಯಲ್ಲಿ “ಬಾಬಾ ಕಾ ಡಾಬಾ” – ನಿಮ್ಮೂರಿನ ಹೊಟೇಲ್‌ಗಳನ್ನು Zomato ಗೆ ಶಿಫಾರಸ್ಸು ಮಾಡಿ!

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಹೊಸದಾಗಿ ಆರಂಭಿಸಿದ ರೆಸ್ಟೋರೆಂಟ್ ಮುಚ್ಚಿದ ಬಳಿಕ ಕಾಂತ ಪ್ರಸಾದ್ ಕಳೆದೊಂದು ವಾರದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎನ್ನಲಾಗಿದೆ. ಜೊತೆಗೆ ರೆಸ್ಟೋರೆಂಟ್ ಸಾಲದ ಬಾಧೆ ಕೂಡ ಹೊರೆಯಾಗುತ್ತಿದೆ. ಹೀಗಾಗಿ ಆತ್ಯಹತ್ಯೆಗೆ ಯತ್ನಿಸಿದ್ದಾರೆ ಎಂದು ಕಾಂತ ಪ್ರಸಾದ್ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here