ತಮ್ಮನ್ನು ಜಗತ್ತಿಗೆ ಪರಿಚಯಿಸಿದ ಯೂಟ್ಯೂಬರ್ ವಿರುದ್ಧವೇ ದೂರು ದಾಖಲಿಸಿದ “ಬಾಬಾ ಕಾ ಡಾಬಾ” ದಂಪತಿ!

0
154
Tap to know MORE!

ನವದೆಹಲಿ: ಕೊರೊನಾ ಲಾಕ್​ಡೌನ್​​ ಹಿನ್ನೆಲೆ ತನ್ನ ಅಂಗಡಿಗೆ ಗ್ರಾಹಕರು ಬಾರದೇ ಕಂಗಾಲಾಗಿದ್ದ 80 ವರ್ಷದ ವೃದ್ಧರೊಬ್ಬರು ಕಣ್ಣೀರಿಟ್ಟ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ವಿಡಿಯೋ ನೋಡಿದ ಬಳಿಕ ಬಾಬಾ ಕಾ ಡಾಬಾ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿತ್ತು. ಢಾಬಾಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರಲಾರಂಭಿಸಿ ವ್ಯಾಪಾರ ಹೆಚ್ಚಾಗಿತ್ತು. ಆದ್ರೀಗ ವಿಡಿಯೋವನ್ನ ಚಿತ್ರೀಕರಿಸಿದ್ದ ಯೂಟ್ಯೂಬರ್ ನನ್ನ ಹೆಸರಲ್ಲಿ ದೇಣಿಗೆ ಸಂಗ್ರಹಿಸಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ವೃದ್ಧ ಕಾಂತ ಪ್ರಸಾದ್​ ದೂರು ದಾಖಲಿಸಿದ್ದಾರೆ.

ಗೌರವ್ ವಾಸನ್ ಅನ್ನೋ ಇನ್ಸ್​​ಟಾಗ್ರಾಂ ಇನ್​ಫ್ಲುಯೆನ್ಸರ್ ಕಾಂತಾ ಪ್ರಸಾದ್​ ಅವರ ವಿಡಿಯೋವನ್ನ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗ್ರಾಹಕರು ಇವರ ಅಂಗಡಿಗೆ ಭೇಟಿ ಕೊಡುವಂತೆ ಮನವಿ ಮಾಡಿದ್ದರು.

ಇದನ್ನೂ ನೋಡಿ: Zomato ಪಟ್ಟಿಯಲ್ಲಿ “ಬಾಬಾ ಕಾ ಡಾಬಾ” – ನಿಮ್ಮೂರಿನ ಹೊಟೇಲ್‌ಗಳನ್ನು Zomato ಗೆ ಶಿಫಾರಸ್ಸು ಮಾಡಿ!

ಇದರಿಂದ ಬಾಬಾ ಕಾ ಢಾಬಾ ರಾತ್ರೋರಾತ್ರಿ ಫೇಮಸ್​ ಆಗಿ, ವೃದ್ಧನಿಗೆ ನೆರವಾಗಿತ್ತು. ಅಲ್ಲದೆ ಅಪಾರ ಪ್ರಮಾಣದ ನೆರವು ಕೂಡ ಹರಿದುಬಂದಿತ್ತು. ಆದ್ರೆ ಅದೇ ವ್ಯಕ್ತಿಯ ವಿರುದ್ಧ ಈಗ ಕಾಂತಾ ಪ್ರಸಾದ್ ಸಿಡಿದೆದ್ದಿದ್ದಾರೆ.

ಗೌರವ್ ವಾಸನ್​ ನಮ್ಮ ವಿಡಿಯೋ ಚಿತ್ರೀಕರಿಸಿ ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡಿದ್ದರು. ಢಾಬಾ ಮಾಲೀಕನಿಗೆ ಹಣದ ಸಹಾಯ ಮಾಡಿ ಅಂತ ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಕೇಳಿದ್ದರು. ಆದ್ರೆ ಬೇಕಂತಲೇ ದೇಣಿಗೆ ಸಂಗ್ರಹಕ್ಕೆ ತನ್ನ ಹಾಗೂ ತನ್ನ ಸ್ನೇಹಿತರ ಬ್ಯಾಂಕ್​​ ಖಾತೆಗಳ ಮಾಹಿತಿ ಹಾಗೂ ಮೊಬೈಲ್ ನಂಬರ್ ಕೊಟ್ಟಿದ್ದಾರೆ. ಇದರಿಂದ ಭಾರೀ ಮೊತ್ತದ ದೇಣಿಗೆ ಸಂಗ್ರಹಿಸಿದ್ದಾರೆ. ಆದ್ರೆ ಹಣ ಬಂದಿರುವ ಬಗ್ಗೆ ನನಗೆ ಮಾಹಿತಿಯೇ ನೀಡದೆ ವಂಚಿಸಿದ್ದಾರೆ ಎಂದು ಕಾಂತಾ ಪ್ರಸಾದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

LEAVE A REPLY

Please enter your comment!
Please enter your name here