ಬೆಂಗಳೂರು : ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ “ಬಾರುಕೋಲು ಚಳುವಳಿ”

0
63

ಬೆಂಗಳೂರು: ಕೃಷಿಕಾಯ್ದೆ ವಿರೋಧಿಸಿ ಇಂದು ವಿಧಾನಸೌಧ ಮುತ್ತಿಗೆ ಹಿನ್ನೆಲೆಯಲ್ಲಿ ಜೊತೆಗೆ ರಾಜ್ಯ ಸರ್ಕಾರದ ರೈತ ವಿರೋಧಿ‌ ಧೋರಣೆ ವಿರೋಧಿಸಿ ರೈತರು ಬಾರುಕೋಲು ಚಳುವಳಿ ಮಾಡಲು ಇಂದು ಬೆಳಗ್ಗೆಯಿಂದಲೇ ನಗರಕ್ಕೆ ಆಗಮಿಸುತ್ತಿದ್ದಾರೆ. ಇಂದು ಬೆಳಗ್ಗೆ 11 ಗಂtಟೆಗೆ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ವಿಧಾನಸೌಧವರೆಗೆ ಪಾದಯಾತ್ರೆ ಮೂಲಕ ರೈತರು ಹೋರಾಟ ಮಾಡಲಿದ್ದು, ಈಗಾಗಲೇ ರೈತರು ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‍ಗೆ ಆಗಮಿಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ರೈತರ ಪಾದಯಾತ್ರೆ ಶುರುವಾಗಲಿದೆ. ರೈತರ ಹೆಗಲ‌ ಮೇಲೆ ಹಸಿರು ಶಾಲು, ಬಲಗೈಯಲ್ಲಿ ಬಾರುಕೋಲು ಮೂಲಕ ಸರ್ಕಾರಕ್ಕೆ ಮುಸಿ ಮುಟ್ಟಿಸಲಿದ್ದಾರೆ.

ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇದನ್ನೂ ಓದಿ: ಪೆಟ್ರೋಲ್ ದರ ಮತ್ತಷ್ಟು ಏರಿಕೆ | ಎರಡು ವರ್ಷಗಳಲ್ಲೇ ಗರಿಷ್ಠ |

ಕಾರ್ಪೋರೇಷನ್ ಸರ್ಕಲ್, ವಿಧಾನಸೌಧ ಮೂಲಕ ರಾಜಭವನಕ್ಕೆ ತೆರಳಲಿದ್ದಾರೆ. ಸಂಗೊಳ್ಳಿರಾಯಣ್ಣ ಪ್ರತಿಮೆ, ಮೌರ್ಯ ಸರ್ಕಲ್ ಫ್ಲೈಓವರ್, ಫ್ರೀಡಂ ಪಾರ್ಕ್ ಮುಂಭಾಗದಲ್ಲಿ ಪೊಲೀಸರ ಬಂದೋಬಸ್ತ್ ಮಾಡಲಾಗ್ತಿದೆ. 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗುತ್ತದೆ ಎಂದು ಪಶ್ಚಿಮ ವಲಯ ಹೆಚ್ಚುವರಿ ಆಯುಕ್ತ ಸೌಮೇಂದು ಮುಖರ್ಜಿ ಹೇಳಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಿಟಿ ರೈಲ್ವೆ ಸ್ಟೇಷನ್, ಮೆಜೆಸ್ಟಿಕ್, ಗಾಂಧಿನಗರ, ಆನಂದ್‍ರಾವ್ ಸರ್ಕಲ್, ಮಲ್ಲೇಶ್ವರಂ, ಶೇಷಾದ್ರಿಪುರಂ, ಅರಮನೆ ರಸ್ತೆ, ಓಕಳೀಪುರಂ, ಕೆ.ಆರ್. ಸರ್ಕಲ್, ವಿಧಾನಸೌಧ, ರಾಜಭವನ ಆಸುಪಾಸು ಕಾರ್ಪೋರೇಷನ್ ಸುತ್ತಮುತ್ತ, ಕಬ್ಬನ್‍ಪಾರ್ಕ್ ಸುತ್ತಮುತ್ತ ಮತ್ತು ಮೈಸೂರು ಬ್ಯಾಂಕ್ ಬಳಿ ಬೆಳಗ್ಗೆ 10 ಗಂಟೆಯ ನಂತರ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಗಳಿವೆ.

LEAVE A REPLY

Please enter your comment!
Please enter your name here