ಬಾಲಕಿಯನ್ನು ಅತ್ಯಾಚಾರ ಮಾಡಿ ಬರ್ಬರ ಹತ್ಯೆಗೈದ ಕಾಮುಕರು

0
180
Tap to know MORE!

ಉತ್ತರಪ್ರದೇಶ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ವಿಕೃತವಾಗಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಲಖೀಮ್ ಪುರದಲ್ಲಿ ನಡೆದಿದೆ. ಬಾಲಕಿಯ ದೇಹವು ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದ್ದು, ಆಕೆಯ ಕಣ್ಣು ಕಿತ್ತು ನಾಲಗೆಯನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಬಾಲಕಿಯು ಮನೆಯಲ್ಲಿ ಕಾಣಿಸದೇ ಇದ್ದಾಗ ಪೋಷಕರು ಆಕೆಯನ್ನು ಹುಡುಕಾಟ ನಡೆಸುತ್ತಾರೆ. ಈ ವೇಳೆ ಊರಿನ ಬದಿಯ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಮೃತದೇಹ ವಿವಸ್ತ್ರಗೊಂಡು ಪತ್ತೆಯಾಗಿದೆ. ಆಕೆ ಧರಿಸಿದ ಶಾಲಿನಿಂದಲೇ ಕತ್ತು ಬಿಗಿದು ಕೊಲೆ ಮಾಡಲಾಗಿದ್ದು, ಕಣ್ಣು ಕಿವಿಗಳನ್ನು ಕತ್ತರಿಸಿ ಮೃಗಗಳಂತೆ ಈ ಕೃತ್ಯವೆಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಗ್ರಾಮದ ಇಬ್ಬರು ವ್ಯಕ್ತಿಗಳು ಆರೋಪಿಗಳೆಂದು ಬಂಧಿಸಲಾಗಿದೆ.

ನೀಚ ಕೃತ್ಯವೆಸಗಿ ಬಾಲಕಿಯನ್ನು ಹತ್ಯೆಗೈದ ಅಪರಾಧಿಗಳಿಗೆ ಕಠಿಣ ಶಿಕ್ಷೆಯೊಂದಿಗೆ ಮರಣ ದಂಡನೆ ವಿಧಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಈ ಪ್ರಕರಣವು ದೇಶದಾದ್ಯಂತ ಜನರನ್ನು ಬೆಚ್ಚಿಬೀಳಿಸಿದೆ.

LEAVE A REPLY

Please enter your comment!
Please enter your name here