ಕೆನಡಾ: ಕೆನಡಾದ ಏಳು ವರ್ಷದ ಬಾಲಕಿ 80 ಕೆಜಿ ಡೆಡ್ಲಿಪ್ಟ್ ಮಾಡಿ ಹೊಸ ದಾಖಲೆ ಬರೆದಿದ್ದಾಳೆ.
ರೋರಿ ವ್ಯಾನ್ ಉಲ್ಫ್ ಎನ್ನುವ ಏಳು ವರ್ಷದ ಬಾಲಕಿ ಇರುವುದು ನಾಲ್ಕು ಅಡಿ ಎತ್ತರ. ಆದರೆ ಈಕೆ 80ಕೆಜಿ ತೂಕದ ವೇಟ್ಲಿಪ್ಟಿಂಗ್ ಮಾಡುತ್ತಾಳೆ. ಈಕೆಯ ಫೋಟೋ ಮತ್ತು ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ: ಏಕಕಾಲದಲ್ಲಿ ಎರಡೂ ಕೈಗಳಿಂದ ಬರಹ – ವಿಶ್ವ ದಾಖಲೆ ಸೃಷ್ಟಿಸಿದ ಮಂಗಳೂರಿನ ಹುಡುಗಿ
ಯುಎಸ್ ನಲ್ಲಿ ನಡೆದ 11ವರ್ಷದೊಳಗಿನವರ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಗೆದ್ದು ಯುಎಸ್ನ ಅತ್ಯಂತ ಕಿರಿಯ ಯುವ ರಾಷ್ಟ್ರೀಯ ಚಾಂಪಿಯನ್ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದಾಳೆ.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ