ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಆರೋಪ

0
238
Tap to know MORE!

ಡೆಹ್ರಾಡೂನ್ : ಉತ್ತರಾಖಂಡ್ ನ ದ್ವಾರಹಟ್ ನ ಬಿಜಿಪಿ ಶಾಸಕನ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ಶಾಸಕ ನೇಗಿಯೇ ತನ್ನ ಮಗುವಿನ ತಂದೆ ಎಂಬುದಕ್ಕೆ ಡಿ ಎನ್ ಎ ಪರೀಕ್ಷೆ ಮಾಡಿಸಿ ಎಂಬುದಾಗಿ ಬಹಿರಂಗ ಸವಾಲು ಹಾಕಿದ್ದಾರೆ. ಇದರ ಬೆನ್ನಲ್ಲೇ ಶಾಸಕ ನೇಗಿ ಪತ್ನಿ ಮಹಿಳೆಯ ವಿರುದ್ಧ ಬ್ಲಾಕ್ ಮೇಲ್ ಕೇಸ್ ಹಾಕಿದ್ದಾರೆ.

2016 ಮತ್ತು 2018ರ ನಡುವೆ ಶಾಸಕ ನೇಗಿ ಹಲವಾರು ಬಾರಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ತಾನೊಂದು ಮಗುವಿಗೆ ಜನ್ಮ ನೀಡಿದ್ದು ಈ ಬಗ್ಗೆ ಸತ್ಯ ಬಹಿರಂಗಪಡಿಸಲು ಡಿ ಎನ್ ಎ ಪರೀಕ್ಷೆಯನ್ನು ನಡೆಸಬೇಕೆಂದು ವಿವಾದಿತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಹಿಳೆಯು ಶಾಸಕರ ನೆರೆಯವರಾಗಿದ್ದು, ದೆಹಲಿ, ನೇಪಾಳ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 2016ರಲ್ಲಿ ತಾಯಿಯ ಅನಾರೋಗ್ಯದ ಸಂದರ್ಭದಲ್ಲಿ ನೆರವು ಕೋರಲು ಶಾಸಕರನ್ನು ಭೇಟಿಯಾಗಿದ್ದೆ. ಆದರೆ ಈ ವಿಚಾರವನ್ನು ಬಾಯಿ ಬಿಡದಂತೆ ಶಾಸಕ ನೇಗಿ ಪತ್ನಿ 25 ಲಕ್ಷದ ಆಮಿಷವೊಡ್ಡಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ನೆಹರು ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಮಧ್ಯೆ ಅದೇ ಪೊಲೀಸ್ ಠಾಣೆಯಲ್ಲಿ ಶಾಸಕನ ಪತ್ನಿಯೂ ಪ್ರತಿದೂರು ನೀಡಿದ್ದು, ಮಹಿಳೆ ತನ್ನ ಪತಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳೆಂಬ ಆರೋಪ ಮಾಡಿದ್ದಾರೆ. ಎರಡೂ ದೂರುಗಳನ್ನು ದಾಖಲಿಸಿಕೊಂಡ ಪೊಲೀಸರು ಡಿಜಿ ಅಶೋಕ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಕುರಿತು ಶಾಸಕ ಮಹೇಶ್ ನೇಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಡಿಎನ್ಎ ಪರೀಕ್ಷೆ ನಡೆಸುವಂತೆ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಪ್ರೀತಮ್ ಸಿಂಗ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here