ಪರೀಕ್ಷೆಗೆ ಓದುವಾಗ ಕೇಳುತ್ತಿದ್ದ ಬಿಟಿಎಸ್ ಹಾಡುಗಳು ನನ್ನಲ್ಲಿ ಒತ್ತಡ ಕಡಿಮೆ ಮಾಡಿದೆ : ಜೆಇಇ ಟಾಪರ್

0
180
Tap to know MORE!

ಜೆಇಇ ಮೈನ್ಸ್ ಪರೀಕ್ಷೆಯ ಫಲಿತಾಂಶವನ್ನು ನಿನ್ನೆ ಘೋಷಿಸಲಾಯಿತು. ಶೇ.99.97% ಗಳಿಸಿದ ಅನುಷ್ಕಾ, ಜಾರ್ಖಂಡ್‌ನ ಬಾಲಕಿಯರ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರು.

ಅನುಷ್ಕಾ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದು, ಯಾವಾಗಲೂ ಉತ್ತಮ ಅಂಕಗಳನ್ನು ಪಡೆಯುತ್ತಿದ್ದರು. ಜೆಇಇ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ, ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನವು ವೈರಲ್ ಆಗುತ್ತಿದೆ.

ಅವರು ಕೊರಿಯಾದ ಬ್ಯಾಂಡ್‌ನ ಬಿಟಿಎಸ್‌ನ (BTS) ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಅದರ ಹಾಡುಗಳನ್ನು ಕೇಳಲು ಇವರು ಇಷ್ಟಪಡುತ್ತಾರೆ ಎಂದು ಅವರು ಸ್ಥಳೀಯ ಪತ್ರಿಕೆಗೆ ತಿಳಿಸಿದರು. ಈ ಹಾಡುಗಳು ಕೇಳುತ್ತಿದ್ದರಿಂದ, ಅಧ್ಯಯನದ ಮಧ್ಯದಲ್ಲಿ ಒತ್ತಡವನ್ನು ನಿಭಾಯಿಸಲು ಅವರಿಗೆ ಸಹಾಯ ಮಾಡಿದೆ ಎಂದು ಅವರು ಹೇಳಿದರು.

ನೆಟ್ಟಿಗರು ಭಾರಿ ಪ್ರಶಂಸೆ ಸಲ್ಲಿಸುತ್ತಿದ್ದಾರೆ. ಹಾಗೆಯೇ, ಬಿಟಿಎಸ್ ಅಭಿಮಾನಿಗಳು ಇವರ ಈ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here