ಭಾರತದಲ್ಲಿದ್ದಾರಂತೆ ಅಮೇರಿಕಾದ ನೂತನ ಅಧ್ಯಕ್ಷ ಬಿಡೆನ್‌ ರ ದೂರದ ಸಂಬಂಧಿಕರು!

0
164
ಜೋ ಬಿಡೆನ್ joe biden suddivani, kannada news
Tap to know MORE!

ಮುಂಬೈ: ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ಅವರು 2013 ರಲ್ಲಿ ಭಾರತ ಪ್ರವಾಸದ ಸಂದರ್ಭದಲ್ಲಿ ಮುಂಬೈನಲ್ಲಿ ತನ್ನ ಕೆಲವು ದೂರದ ಸಂಬಂಧಿಗಳು ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು. ಅದಲ್ಲದೆ, ಎರಡು ವರ್ಷಗಳ ನಂತರ ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲೂ ಸಹ ಜೋ ಬಿಡನ್ ಇದನ್ನು ಪುನರುಚ್ಚರಿಸಿದ್ದರು. ಮುಂಬೈನಲ್ಲಿ ಐವರು ಬಿಡೆನ್‌ಗಳು ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು.

77 ವರ್ಷದ ಜೋ ಬಿಡೆನ್ ಇನ್ನೆರಡು ತಿಂಗಳಲ್ಲಿ 46 ನೇ ಯುಎಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಅದರೆ ಮುಂಬೈನಲ್ಲಿ ಯಾರೂ ಜೋ ಬಿಡೆನ್ ಅವರ ಸಂಬಂಧಿ ಎಂದು ಇನ್ನೂ ಸಹ ಹೇಳಿಕೊಳಲಿಲ್ಲ!

ಇದನ್ನೂ ಓದಿ: ಹಲವು ‘ಪ್ರಥಮ’ಗಳಿಗೆ ಸಾಕ್ಷಿಯಾದ ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಕೆಲವು ದಶಕಗಳ ಹಿಂದೆ, ಸೆನೆಟರ್ ಆದ ಕೂಡಲೇ, ಮುಂಬಯಿಯಲ್ಲಿರುವ ಬಿಡೆನ್ ಎಂಬ ಕೊನೆಯ ಹೆಸರಿನಿಂದ ಪತ್ರವೊಂದನ್ನು ಸ್ವೀಕರಿಸಿದ್ದಾಗಿ ಜೋ ಬಿಡನ್ ಹೇಳಿದ್ದರು. ಈ ಮೂಲಕ ಅವರ ಪೂರ್ವಜರೊಬ್ಬರು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡಿದ ಬಗ್ಗೆ ಅವರು ತಿಳಿದುಕೊಂಡರು ಎಂದಿದ್ದಾರೆ. ಜಾರ್ಜ್ ಬಿಡೆನ್ ಈಸ್ಟ್ ಇಂಡಿಯಾ ಟ್ರೇಡಿಂಗ್ ಕಂಪನಿಯಲ್ಲಿ ಕ್ಯಾಪ್ಟನ್ ಆಗಿದ್ದರು. ಅವರು ಓರ್ವ ಭಾರತೀಯ ಮಹಿಳೆಯನ್ನು ಮದುವೆಯಾಗಿ, ನಿವೃತ್ತಿಯ ಬಳಿಕವೂ ಭಾರತದಲ್ಲಿ ನೆಲೆಸಿದ್ದರು ಎಂದು ಆ ಪತ್ರದ ಮೂಲಕ ತಿಳಿದು ಬಂದಿದೆ ಎಂದಿದ್ದರು.

ಭಾರತ-ಯುಎಸ್ ನಾಗರಿಕ ಪರಮಾಣು ಒಪ್ಪಂದದ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಮತ್ತು ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಷ್ಟಾದರೂ, ಅವರು ಮುಂಬೈಯಲ್ಲಿರುವ ತಮ್ಮ ರಕ್ತಸಂಬಂಧಿಯನ್ನು ಇನ್ನೂ ಸಹ ಸಂಪರ್ಕಿಸಿದ್ದಾರೆಯೇ ಅಥವಾ ಸಂಪರ್ಕಿಸಲು ಪರ್ಯತ್ನಿಸುತ್ತಿದ್ದಾರೆಯೇ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ!

LEAVE A REPLY

Please enter your comment!
Please enter your name here