ಬಿಹಾರ ವಿಧಾನಸಭೆ – ಸ್ಪಷ್ಟ ಬಹುಮತದತ್ತ ಬಿಜೆಪಿ-ಜೆಡಿ(ಯು) ದಾಪುಗಾಲು!

0
147
ಬಿಹಾರ, ಬಿಜೆಪಿ, ಚುನಾವಣಾ ಫಲಿತಾಂಶ
Tap to know MORE!

ಬಿಹಾರ ಚುನಾವಣಾ ಫಲಿತಾಂಶವು ಪ್ರತಿಕ್ಷಣ ಬದಲಾಗುತ್ತಿದ್ದು, ರೋಚಕ ಕ್ಲೈಮ್ಯಾಕ್ಸ್ ನತ್ತ ಸಾಗುತ್ತಿದೆ. ಇದುವರೆಗೆ ಬಿಜೆಪಿ-ಜೆಡಿಯು ಮೈತ್ರಿಯು ಭಾರಿ ಮುನ್ನಡೆ ಕಾಯ್ದುಕೊಂಡಿದೆ. ಅದಲ್ಲದೆ, ಇವರಿಗೆ ಚಿರಾಗ್ ಪಾಸ್ವಾನ್ ಅವರ ಎಲ್ ಜೆಪಿ ಬಲ ಕೂಡಾ ಸಿಗುವುದರಿಂದ ಬಿಹಾರ ವಿಧಾನಸಭೆಯಲ್ಲಿ ಗೆಲುವಿನ ಮುದ್ರೆ ಒತ್ತುವ ಸಾಧ್ಯತೆ ಹೆಚ್ಚಿದೆ.

RJD + Congress = 96
BJP + JD(U) = 114
LJP = 6
ಇತರೆ = ೨೮

ಇದನ್ನೂ ಓದಿ: ಟ್ರಂಪ್‌ಗೆ ಮುಖಭಂಗ – ಜೋ ಬಿಡೆನ್ ಅಮೇರಿಕಾದ ನೂತನ ಅಧ್ಯಕ್ಷ

ಬಿಹಾರದಲ್ಲಿ ಅಕ್ಟೋಬರ್ 28ರ ಮೊದಲ ಹಂತದಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್ 03ರ ಎರಡನೇ ಹಂತದಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. ಶನಿವಾರ ನಡೆದ 3ನೇ ಹಂತದಲ್ಲಿ ಶೇ.51ರಷ್ಟು ಮತದಾನ ನಡೆದಿದೆ.

ಎಕ್ಸಿಟ್ ಪೋಲ್ ಗಳ ಸಮೀಕ್ಷೆಗಳ ಸಮೀಕ್ಷೆಯಲ್ಲಿ ತೇಜಸ್ವಿ ಯಾದವ ರವರ ಆರ್‌ಜೆಡಿ ಪಕ್ಷವು ಗೆಲುವು ಸಾಧಿಸಲಿದ್ದು, ಆರ್ ಜೆ ಡಿ-ಕಾಂಗ್ರೆಸ್ ಬಣ 133 ಸ್ಥಾನ, ಬಿಜೆಪಿ-ಜೆಡಿಯು 100 ಸ್ಥಾನ ಹಾಗೂ ಇತರೆ 11 ಪಡೆಯಲಿದೆ ಎಂದು ಫಲಿತಾಂಶ ಬಂದಿದೆ.

LEAVE A REPLY

Please enter your comment!
Please enter your name here