ಬೀರಮಲೆ ಗುಡ್ಡೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

0
401
Tap to know MORE!

ಪುತ್ತೂರಿನ ಬೀರಮಲೆ ಗುಡ್ಡೆಯಲ್ಲಿ ಯುವಕರೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ಸಿಕ್ಕಿಬಿದ್ದ ಮಂಗಳೂರಿನ ಯುವತಿ ಪ್ರಕರಣವು ಹೊಸ ತಿರುವನ್ನು ಪಡೆದುಕೊಂಡಿದೆ. ಮಂಗಳೂರಿನ ಕೊಡಿಯಾಲ್ ಬೈಲಿನ 17 ವರ್ಷದ ಯುವತಿಯನ್ನು ಆರೋಪಿ ಯುವಕರು ಸೇರಿ ಅಪಹರಿಸಿದ ಬಗ್ಗೆ ಆಕೆಯ ತಂದೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಮ್ಮದ್ ನಯೀಮ್, ಮಹಮ್ಮದ್ ತಾಸೀರ್, ಇಮ್ರಾನ್ ಎಂದು ಮೂವರನ್ನು ಬಂಧಿಸಿದ್ದು ಉಳಿದವರ ಬಂಧನಕ್ಕೆ ಬಲೆಬೀಸಿದ್ದಾರೆ. ಯುವತಿಯ ತಂದೆಯ ದೂರಿನ ಅನ್ವಯ, 17 ವರ್ಷದ ಬಾಲಕಿ ಆಗಸ್ಟ್ 7ರಂದು ಸಂಜೆ 7 ಗಂಟೆಗೆ ತನ್ನ ಮನೆಯಿಂದ ಮಂಗಳೂರಿನ ಎಂಪಾಯರ್ ಮಾಲ್ ಗೆ ಹೋಗಿ ಬರುತ್ತೇನೆಂದು ಹೋದವಳು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ.

ಹಲವು ಕಡೆ ವಿಚಾರಿಸಿ ಹುಡುಕಿದರೂ ಮಗಳು ಪತ್ತೆಯಾಗಿಲ್ಲ. ಇದೇ ಸಮಯದಲ್ಲಿ ಆಕೆ ಪುತ್ತೂರಿನ ಬೀರಮಲೆ ಗುಡ್ಡೆಯಲ್ಲಿ ಇರುವುದಾಗಿ ಆಗಸ್ಟ್ 08 ರಂದು ಬೆಳಗ್ಗೆ ತಿಳಿಯಿತು. ‌ಅದರಂತೆ ಮಧ್ಯಾಹ್ನ ಪುತ್ತೂರಿನ ಬೀರಮಲೆಗುಡ್ಡೆಗೆ ಬಂದು ಪರಿಶೀಲಿಸಿದಾಗ ಮಗಳು ಆರೋಪಿಗಳ ಜೊತೆ ಕಾರಿನಲ್ಲಿ ಪತ್ತೆಯಾಗಿದ್ದಾಳೆ ಎಂದು ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಬಿಜೈ ಬಳಿ ಒಂದು ಪ್ಲಾಟ್‌ ಗೆ ಮಗಳನ್ನು ಒತ್ತಾಯದಿಂದ ಕರೆದುಕೊಂಡು ಹೋಗಿ ಪಾರ್ಟಿ ಮಾಡಿ ರಾತ್ರಿ ಅಲ್ಲೇ ಉಳಿಸಿಕೊಂಡಿದ್ದಾರೆ. ಮರುದಿನ ಬೆಳಗ್ಗೆ ಮಗಳು ಮನೆಗೆ ಹೋಗುತ್ತೇನೆಂದರೂ ಬಿಡದೆ ಪುತ್ತೂರಿನಲ್ಲಿ ಸ್ನೇಹಿತೆಯನ್ನು ಭೇಟಿಯಾಗಲಿದೆ ಎಂದು ಹೇಳಿ ಪುಸಲಾಯಿಸಿ ಪರ್ಲಡ್ಕ ಬಳಿಯ ಬೀರಮಲೆಗುಡ್ಡೆ ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಯುವತಿಯ ತಂದೆ ಹೇಳಿದ್ದಾರೆ.

ಅಪ್ರಾಪ್ತೆ ಎಂದು ತಿಳಿದಿದ್ದರೂ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದಲೇ ಅಕ್ರಮವಾಗಿ ಕಾರಿನಲ್ಲಿ ಅಪಹರಿಸಿಕೊಂಡು ಪುತ್ತೂರಿನ ಬೀರಮಲೆಗುಡ್ಡೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಅಪ್ರಾಪ್ತ ಬಾಲಕಿಯ ತಂದೆ ನೀಡಿದ ದೂರಿನಂತೆ ಪುತ್ತೂರಿನ ಮಹಿಳಾ ಠಾಣೆಯ ಪೊಲೀಸರು ಅಪಹರಣ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರು ಕೇರಳ ಮೂಲದ್ದಾಗಿದ್ದು ಆರೋಪಿಗಳು ಎಲ್ಲಿಯವರೆಂದು ತಿಳಿದಿಲ್ಲ.

LEAVE A REPLY

Please enter your comment!
Please enter your name here