ಬೆಂಗಳೂರನ್ನು ಮತ್ತೊಮ್ಮೆ ಲಾಕ್ ಮಾಡಲ್ಲ : ಯಡಿಯೂರಪ್ಪ

0
181
Tap to know MORE!

ಕೋವಿಡ್ -19 ನಿಯಂತ್ರಣಕ್ಕಾಗಿ ಬೆಂಗಳೂರಿನ್ನು ಮತ್ತೆ ಲಾಕ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ನಗರದಲ್ಲಿ ಹೆಚ್ಚುತ್ತಿರುವ ಮಹಾಮಾರಿ ಕೊರೋನವನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಯಡಿಯೂರಪ್ಪ ಅವರು ಇಂದು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಶಾಸಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ವಿರೋಧ ಪಕ್ಷದ ಶಾಸಕರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದ ಯಡಿಯೂರಪ್ಪ, ಲಾಕ್ಡೌನ್ ಜಾರಿಗೊಳಿಸುವುದಿಲ್ಲ ಎಂಬ ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ.

ಕೊರೋನಾ ಭೀತಿಯಿಂದ ಈಗಾಗಲೇ ಕೆಲವು ವಾರ್ಡ್ ಗಳನ್ನು ಸೀಲ್ ಮಾಡಲಾಗಿದೆ. ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಭಾರಿ ಏರಿಕೆ ಕಾಣುತ್ತಿರುವುದರಿಂದ, ಬೆಂಗಳೂರಿನಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡುವಂತೆ ಅನೇಕ ಶಾಸಕರಿಂದ ಬೇಡಿಕೆಗಳು ಬಂದಿವೆ. ಆದ್ದರಿಂದ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರು ಶಾಸಕರ ಸಭೆಯ ನೇತೃತ್ವ ವಹಿಸಿದ್ದರು. ಪಕ್ಷಗಳು ಮತ್ತೆ ಲಾಕ್ಡೌನ್ ಹೇರಲು ಒತ್ತಾಯಿಸಿದರೂ, ಸರ್ಕಾರ ಅದನ್ನು ಮಾಡುವುದಿಲ್ಲ ಎಂದು ಸಿಎಂ ಹೇಳಿದರು.

LEAVE A REPLY

Please enter your comment!
Please enter your name here