ಬೆಂಗಳೂರನ್ನು 8 ವಿಭಾಗಗಳಾಗಿ ವಿಂಗಡನೆ – 8 ಸಚಿವರ ನೇಮಕ!

0
154
Tap to know MORE!

ರಾಜ್ಯ ರಾಜಧಾನಿಯಲ್ಲಿ ಕೊರೋನಾ ನಿಯಂತ್ರಣ ತಪ್ಪಿ ಹೋಗುತ್ತಿದೆ ಎಂದು ಅರಿವಾಗಿ, ಇದನ್ನು ಮತ್ತೆ ನಿಯಂತ್ರಣಕ್ಕೆ ತರಲು ಮುಖ್ಯಮಂತ್ರಿಯವರು ಇಂದು ಬಹುದೊಡ್ಡ ರಣತಂತ್ರವನ್ನು ರೂಪಿಸಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಹರಡದಂತೆ, ಅದರ ಹೊಣೆಗಾರಿಕೆಯನ್ನು 8 ಸಚಿವರು ಸೇರಿದಂತೆ ಮುಖ್ಯಮಂತ್ರಿಗಳ 8 ರಾಜಕೀಯ ಕಾರ್ಯದರ್ಶಿಗಳಿಗೆ ವಹಿಸಿದ್ದಾರೆ.

ಇಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನಲ್ಲಿ ಕೊರೋನಾ ಹರಡುವಿಕೆಯನ್ನು ತಡೆಯುವ ಕುರಿತು ಚರ್ಚೆ ನಡೆಯಿತು. ಆ ಸಭೆಯಲ್ಲಿ, ಬೆಂಗಳೂರನ್ನು 8 ವಲಯಗಳಾಗಿ ವಿಂಗಡಿಸಿರುವ ಮುಖ್ಯಮಂತ್ರಿ, 8 ಸಚಿವರು ಮತ್ತು ಮುಖ್ಯಮಂತ್ರಿಗಳ 8  ರಾಜಕೀಯ ಕಾರ್ಯದರ್ಶಿಗಳಿಗೆ ಕೊರೋನಾ ನಿಯಂತ್ರಣದ ಜವಾಬ್ದಾರಿಯನ್ನು ಹೊರಿಸಿದ್ದಾರೆ.

ಬೆಂಗಳೂರು ಪಶ್ಚಿಮ, ಬೆಂಗಳೂರು ದಕ್ಷಿಣ, ಆರ್ ಆರ್ ನಗರ, ಮಹದೇವಪುರ, ಬೆಂಗಳೂರು ಪೂರ್ವ, ದಾಸರಹಳ್ಳಿ, ಯಲಹಂಕ ಮತ್ತು ಬೊಮ್ಮನಹಳ್ಳಿ ವಲಯಗಳಾಗಿ 8 ವಿಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಇಂತಹ ವಲಯಗಳಿಗೆ, ಆರ್ ಅಶೋಕ್, ಡಾ.ಸಿಎಸ್.ಅಶ್ವತ್ಥ್ ನಾರಾಯಣ, ಎಸ್ ಸುರೇಶ್ ಕುಮಾರ್, ಎಸ್ ಟಿ ಸೋಮಶೇಖರ್, ಕೆ.ಗೋಪಾಲಯ್ಯ, ಸೋಮಣ್ಣ, ಎಸ್ ಆರ್ ವಿಶ್ವನಾಥ್, ಭೈರತಿ ಬಸವರಾಜ್ ಸೇರಿದಂತೆ 8 ಸಚಿವರು, 8 ಸಿಎಂ ರಾಜಕೀಯ ಕಾರ್ಯದರ್ಶಿಗಳಿಗೆ ಹೊಣೆಗಾರಿಕೆ ನೀಡಿದ್ದಾರೆ.

ವಲಯವಾರು ನೇಮಕಗೊಂಡಿರುವ ಸಚಿವರು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿಗಳು, ನಿಯೋಜಿತ ವಲಯಗಳಿಗೆ ತೆರಳಿ, ಜನರಲ್ಲಿ ಜಾಗೃತಿ ಮೂಡಿಸುವಂತ ಕೆಲಸವನ್ನು ಮಾಡಬೇಕು ಮತ್ತು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಹಾಗೂ ಪ್ರತಿ ದಿನದ ಕಾರ್ಯಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಮಾಡುವಂತೆಯೂ ಸೂಚನೆ ನೀಡಿದ್ದಾರೆ. ಅದಲ್ಲದೇ, ವಲಯಗಳಲ್ಲಿ ಏನೇ ಫಲಿತಾಂಶ ಬಂದರೂ, ಅದಕ್ಕೆ ಆಯಾ ವಲಯದ ಸಚಿವರು, ಸಿಎಂ ಕಾರ್ಯದರ್ಶಿಗಳೇ ಹೊಣೆ ಎಂಬುದಾಗಿಯೂ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಬೆಂಗಳೂರು ಕೊರೋನಾ ನಿಯಂತ್ರಣಕ್ಕೆ ಅಷ್ಟದಿಕ್ಪಾಲಕರಿಗೆ ಹೊಣೆ ಹೊರಿಸಿದ್ದಾರೆ.

LEAVE A REPLY

Please enter your comment!
Please enter your name here