ಬೆಂಗಳೂರಿನಲ್ಲಿ ನಡೆದ ಗಲಭೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ: ಎಸ್ ಡಿಪಿಐ ಸಂಘಟನೆ

0
236
Tap to know MORE!

ಬೆಂಗಳೂರು: ನಗರದಲ್ಲಿ ನಿನ್ನೆ ನಡೆದ ಗಲಭೆ ಘಟನೆಯ ಕುರಿತು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಎಸ್ ಡಿ ಪಿ ಐ ಸಂಘಟನೆ, ಗಲಭೆಯಲ್ಲಿ ತಮ್ಮ ಕೈವಾಡವಿರುವ ಆರೋಪವನ್ನು ಬಲವಾಗಿ ತಳ್ಳಿ ಹಾಕಿದೆ. ಗಲಭೆಗೆ ಪೊಲೀಸರ ನಿರ್ಲಕ್ಷ್ಯತನವೇ ಕಾರಣ ಎಂದು ಆರೋಪಿಸಿದೆ.

ಪ್ರವಾದಿಯವರನ್ನು ನಿಂದಿಸಿದವರ ವಿರುದ್ಧ ದೂರು ನೀಡಲು ಠಾಣೆಗೆ ನಮ್ಮ ಸಂಘಟನೆಯವರು ಹೋದಾಗ ಪೊಲೀಸರು ಸ್ವೀಕರಿಸಲು ವಿಳಂಬ ಮಾಡಿದರು. ಇದರಿಂದ ಜನರು ಪ್ರತಿಭಟನೆ ನಡೆಸಿದ್ದಾರೆ ಎಂದು ಎಸ್ ಡಿಪಿಐ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಗೂ ಇತರ ಸದಸ್ಯರು ಹೇಳಿದರು.

ಇದನ್ನೂ ಓದಿ : ಶಾಸಕರ ಮನೆ ಮೇಲೆ ದಾಳಿ – ಗೋಲಿಬಾರ್ ಗೆ ಮೂವರು ಬಲಿ

ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ಸಂಘಟನೆಯ ಸದಸ್ಯರೇ ನಿನ್ನೆ ಶಾಂತಿ ಕಾಪಾಡಲು ಶ್ರಮಿಸಿದ್ದರು. ನಮ್ಮದು ಜನಪರ ಸಂಘಟನೆ ಇಂತಹ ಕೃತ್ಯಕ್ಕೆ ಉತ್ತೇಜನ ನೀಡುವುದಿಲ್ಲ, ಇದರ ಹಿಂದಿರುವ ನಿಜವಾದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಕ್ಕನ ಮಗ ನವೀನ್ ಮಾವನ ಅಧಿಕಾರದಿಂದ ಈ ವರೆಗೆ ಬಚಾವಾಗಿದ್ದಾನೆ. ಆತ ಈ ರೀತಿ ಅವಹೇಳನ ಮಾಡುತ್ತಿರುವುದು ಇದೇ ಮೊದಲಲ್ಲ. ಸಮಾಜದ ಶಾಂತಿ ಕೆಡಿಸಲು ಇಂತಹ ಪ್ರಯತ್ನ ಮಾಡಿಲಾಗಿದೆ. ಈತನ ವಿರುದ್ಧ ದೂರು ನೀಡಲು ಹೋದಾಗ ಪೊಲೀಸರು ನಿರ್ಲಕ್ಷಿಸಿದ್ದಾರೆ ಮತ್ತು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ ಆದ್ದರಿಂದಲೇ ಜನರು ಪ್ರತಿಭಟನೆ ಮಾಡಬೇಕಾಯಿತು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here