ಬೆಂಗಳೂರು: ಕೊರೋನಾ ನಿಯಂತ್ರಣಕ್ಕೆ ಸಹಾಯ ಮಾಡಲು 13,470 ಕ್ಕೂ ಹೆಚ್ಚು ಜನರು ಬೆಂಗಳೂರು ಪೊಲೀಸರೊಂದಿಗೆ ಸಿವಿಲ್ ಪೊಲೀಸ್ ವಾರ್ಡನ್ಗಳಾಗಿ ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
“ನಾವು ಬೆಂಗಳೂರು ಮತ್ತು ಪ್ರತಿಯೊಬ್ಬ ಬೆಂಗಳೂರಿಗರ ಬಗ್ಗೆ ಹೆಮ್ಮೆಪಡುತ್ತೇವೆ. ನಾಗರಿಕರಿಗೆ ಪೊಲೀಸ್ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಪೊಲೀಸ್ ಆಯುಕ್ತರು ಕರೆ ನೀಡಿದ್ದರು ಮತ್ತು ಪ್ರತಿಕ್ರಿಯೆಯಿಂದ ನಮಗೆಲ್ಲರಿಗೂ ಬಹಳ ಖುಷಿಯಾಗಿದೆ” ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಲ್ಕರ್ ಹೇಳಿದರು.
ನಗರವನ್ನು ನೋಡಿಕೊಳ್ಳಲ್ಲು 13,470ಕ್ಕೂ ಅಧಿಕ ನಾಗರಿಕರು ಪೊಲೀಸರೊಂದಿಗೆ ಭುಜದಿಂದ ಭುಜ ನೀಡಿ ಹೋರಾಡಲು ನೋಂದಾಯಿಸಿಕೊಂಡಿದ್ದಾರೆ ಮತ್ತು ಈ ಪ್ರತಿಕ್ರಿಯೆಯನ್ನು ಅಭೂತಪೂರ್ವ ನಾಗರಿಕ ಚಳುವಳಿ ಎನ್ನಬಹುದು ಎಂದು ಅವರು ಹೇಳಿದರು.
ನಗರದಲ್ಲಿ ಬಹಳಷ್ಟು ಪೋಲೀಸರೂ ಕೊರೋನಾ ಸೋಂಕಿಗೆ ಒಳಪಟ್ಟಿರುವುದರಿಂದ ಮಂಗಳವಾರವಷ್ಟೆ, ಪೋಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಆಸಕ್ತರಲ್ಲಿ ಇಲಾಖೆಗೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಒತ್ತಾಯಿಸಿದ್ದರು.