ಬೆಂಗಳೂರಿನ ಬಿಎಂಟಿಸಿ ಉದ್ಯೋಗಿಗೆ ಕೊರೋನಾ!

0
109
Tap to know MORE!

ಬೆಂಗಳೂರು: ಬಿಎಂಟಿಸಿ ಉದ್ಯೋಗಿಯೊಬ್ಬರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇದೀಗ ನಗರದಲ್ಲಿ ಅವರ ಸಂಪರ್ಕದ ಮೂಲವನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.

“ಉದ್ಯೋಗಿಯು ಇತ್ತೀಚೆಗೆ ಕಲಬುರಗಿ ಮತ್ತು ವಿಜಯಪುರಕ್ಕೆ ಪ್ರಯಾಣವನ್ನು ಬೆಳೆಸಿದ್ದರು ಮತ್ತು ಜೂನ್ 10 ರಂದು ಬೆಂಗಳೂರಿನಲ್ಲಿ ಪರೀಕ್ಷೆಗೆ ಒಳಗಾಗುವ ಮೊದಲು ಮೂರು ದಿನಗಳ ಕಾಲ ರಜೆಯಲ್ಲಿದ್ದರು” ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದರು.

ಬಿಎಂಟಿಸಿ ಉದ್ಯೋಗಿಯೊಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ (ಬಿಎಂಟಿಸಿ) ತನ್ನ ಪ್ರಯಾಣಿಕರ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಪ್ರಾರಂಭಿಸಿದೆ ಮತ್ತು ವೈರಸ್ ಹರಡುವ ಅಪಾಯವನ್ನು ಕಡಿಮೆ ಮಾಡಲು ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದೆ.

ಬಿಎಂಟಿಸಿ ಅಧಿಕಾರಿಗಳ ಪ್ರಕಾರ, ಪರೀಕ್ಷಾ ಫಲಿತಾಂಶಗಳು ಖಚಿತವಾದ ಕೂಡಲೇ ನೌಕರನನ್ನು ನಗರದ ಗೊತ್ತುಪಡಿಸಿದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

“ಉದ್ಯೋಗಿಯು ಕಲಬುರಗಿ ಮತ್ತು ವಿಜಯಪುರಕ್ಕೆ ಪ್ರಯಾಣದ ಇತಿಹಾಸವನ್ನು ಹೊಂದಿದ್ದನು ಮತ್ತು ಜೂನ್ 10 ರಂದು ಬೆಂಗಳೂರಿನಲ್ಲಿ ಪರೀಕ್ಷೆಗೆ ಒಳಗಾಗುವ ಮೊದಲು ಮೂರು ದಿನಗಳ ಕಾಲ ರಜೆಯಲ್ಲಿದ್ದರು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉದ್ಯೋಗಿಗೆ ಜ್ವರ ಅಥವಾ ಆರೋಗ್ಯ ಸಮಸ್ಯೆಗಳ ಯಾವುದೇ ಲಕ್ಷಣಗಳಿಲ್ಲ ಎಂದು ಅಧಿಕಾರಿ ಇದೇ ವೇಳೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here