ಬೆಂಗಳೂರು ಗಲಭೆ : ಕಡೆಗೂ ದೂರು ನೀಡಿದ ಶಾಸಕರು

1
48
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕಣ್ಣೀರಿಟ್ಟ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ

ಆಗಸ್ಟ್ 11 ರಂದು ತಡರಾತ್ರಿ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಸಂಭವಿಸಿದ ಗಲಭೆ ಮತ್ತು ಹಿಂಸಾಚಾರದ ಸಂಬಂಧ ಇದುವರೆಗೆ ದೂರು ನೀಡದ ಶಾಸಕರು, ಕಡೆಗೂ ಇಂದು ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನೀಡಿದ ದೂರಿನ ಹಿನ್ನೆಲೆಯಲ್ಲಿ, ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ.

ದೂರಿನ ಪ್ರಕಾರ ಸುಮಾರು 3,000 ಮಂದಿ ಮನೆಗೆ ಬೆಂಕಿ ನೀಡಿದಲ್ಲದೇ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೇ ಸುಮಾರು 3 ಕೋಟಿ ರೂಪಾಯಿಗಳ ಸ್ವತ್ತು ಕಳವಾಗಿದೆ ಎಂದು ಶಾಸಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಗಲಭೆಯ ಕಿಡಿ ನಿಯಂತ್ರಣಕ್ಕೆ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ಸೆಕ್ಷನ್ 144 ನ್ನು ಆಗಸ್ಟ್ 18 ರ ಬೆಳಿಗ್ಗೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ.

1 COMMENT

LEAVE A REPLY

Please enter your comment!
Please enter your name here