ಬೆಂಗಳೂರು ಗಲಭೆ : ಆರೋಪಿಗಳ ಹೆಸರನ್ನು ಜಾಲತಾಣಗಳಲ್ಲಿ ಪ್ರಕಟಿಸುವಂತೆ ಕೋರಿ ಸಲ್ಲಿಸಿದ ಅರ್ಜಿ ವಜಾ!

0
108
Tap to know MORE!

ಬೆಂಗಳೂರು : “ನಗರ ಪೊಲೀಸರಿಗೆ ಆರೋಪಿಗಳ ಹೆಸರನ್ನು ವೆಬ್‌ಸೈಟ್‌ನಲ್ಲಿ ಹಾಕುವಂತೆ ನಾವು ನಿರ್ದೇಶಿಸಿದರೆ, ಬಳಿಕ ಜನರು ನಮ್ಮಲ್ಲಿಗೆ (ಹೈಕೋರ್ಟ್) ಬಂದು, ನೀವು ನಮ್ಮ ಗೌಪ್ಯತೆ ಹಕ್ಕನ್ನು ಉಲ್ಲಂಘಿಸುತ್ತಿದ್ದೀರಿ ಎಂದು ಹೇಳುತ್ತಾರೆ” ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಬೆಂಗಳೂರು ಗಲಭೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಹೆಸರುಗಳನ್ನು ಜಾಲತಾಣಗಳಲ್ಲಿ ಪ್ರಕಟಿಸುವಂತೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ನ್ಯಾಯಾಲಯ ವಜಾಗೊಳಿಸಿದೆ. ಸಮಾಜದ ವಂಚಿತ ವರ್ಗಗಳ ಪರ ಕೆಲಸ ಮಾಡುತ್ತಿರುವ ಖಲೀಲ್ ಅಹ್ಮದ್ ಎಚ್‌.ಎಂ ಅವರು ಸಲ್ಲಿಸಿದ್ದ ಅರ್ಜಿಯ ಹೆಚ್ಚಿನ ವಿಚಾರಣೆಯನ್ನು ಮಾಡಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿನಗಿ ಅವರ ವಿಭಾಗೀಯ ಪೀಠ, “ವೆಬ್‌ಸೈಟ್‌ನಲ್ಲಿ ಆರೋಪಿಗಳ ಹೆಸರುಗಳನ್ನು ಪ್ರಕಟಿಸಲು, ರಿಟ್ ನ್ಯಾಯಾಲಯದ ನಿರ್ದೇಶನಗಳ ಪ್ರಕಾರ ಹಾನಿಕಾರಕವಾಗಿದೆ . ಬಳಿಕ ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತದೆ. ಹೀಗಾದಾಗ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಆಗಸ್ಟ್ 11 ರಂದು ಪಿ.ನವೀನ್ ಅವರ ಫೇಸ್ ಬುಕ್ ಪುಟದಲ್ಲಿ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಯ ಪೋಸ್ಟ್ ಒಂದನ್ನು ವಿರೋಧಿಸಿ, ಸುಮಾರು 300 ಜನರ ಗುಂಪು ಡಿ.ಜೆ. ಹಳ್ಳಿಯಲ್ಲಿ ಗಲಭೆ ಎಬ್ಬಿಸಿತ್ತು. ಪೊಲೀಸ್ ಠಾಣೆ ಮತ್ತು ಅಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿ, ಡಿ.ಜೆ.ಹಳ್ಳಿಯ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಡಿ ಜೆ ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗಳು, ಇತರ ಖಾಸಗಿ ಕಟ್ಟಡದ ಮೇಲೆ ಕಲ್ಲು ಎಸೆದು ಮಾರಣಾಂತಿಕ ಆಯುಧಗಳಿಂದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಗೆ ದಾಳಿ ಮಾಡಿದ್ದಾರೆ.

ಈವರೆಗೆ ಒಟ್ಟು 64 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈವರೆಗೆ 500 ಕ್ಕೂ ಹೆಚ್ಚು ಆರೋಪಿಗಳನ್ನು ಜನರನ್ನು ಬಂಧಿಸಲಾಗಿದೆ

LEAVE A REPLY

Please enter your comment!
Please enter your name here