ಬೆಂಗಳೂರು : ಡೆತ್‌ನೋಟ್ ಬರೆದಿಟ್ಟು ಪೋಲೀಸ್ ದಂಪತಿ ಆತ್ಮಹತ್ಯೆ..!

0
149
Tap to know MORE!

ಬೆಂಗಳೂರು ಡಿ. 18: ಬೆಂಗಳೂರಿನಲ್ಲಿ ಪೊಲೀಸ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಕಾನ್​ಸ್ಟೇಬಲ್ ಶೀಲಾ, ಹೆಡ್ ಕಾನ್​ಸ್ಟೇಬಲ್ ಸುರೇಶ್ ನೇಣಿಗೆ ಶರಣಾಗಿದ್ದಾರೆ. ಕಳೆದ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ ಶೀಲಾ‌ ಮತ್ತು ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೀಲಾ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸುರೇಶ್ ಎಸಿಪಿ ಕಚೇರಿಯಲ್ಲಿ ರೈಟರ್ ಆಗಿದ್ದರು. ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿನ್ನೆ ಸಂಪಿಗೆಹಳ್ಳಿ ಉಪವಿಭಾಗದ ಇತರೆ ಸಿಬ್ಬಂದಿಗಳೊಂದಿಗೆ ಮೀಟಿಂಗ್ ಇದ್ದ ಕಾರಣದಿಂದ ರಾತ್ರಿಯವರೆಗೂ ಎಸಿಪಿ ಕಚೇರಿಯಲ್ಲಿಯೇ ಇದ್ದ ಸುರೇಶ್ ಮೀಟಿಂಗ್ ಮುಗಿದ ಬಳಿಕ ಲವಲವಿಕೆಯಿಂದಲೇ ಮಾತನಾಡಿದ್ದರು. ಆದರೆ, ಇಂದು ಬೆಳಿಗ್ಗೆ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರು : ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ| ಸ್ನೇಹಿತರ ಮನೆಯಲ್ಲಿ ನೇಣಿಗೆ ಶರಣು

ಈ ಆತ್ಮಹತ್ಯೆಗೆ ನಿಖರ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಪ್ರೀತಿಸಿ ಮದುವೆಯಾಗಿದ್ದ ಸುರೇಶ್ ಮತ್ತು ಶೀಲಾ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೀಲಾ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಸುರೇಶ್ ಕೋಲಾರ ಮೂಲದವರಾಗಿದ್ದರು. ಸಾಯುವ ಮುನ್ನ ಇಬ್ಬರೂ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಏನಿದೆಯೆಂಬ ಬಗ್ಗೆ ಇನ್ನೂ ಬಯಲಾಗಿಲ್ಲ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಪೊಲೀಸ್ ದಂಪತಿಯ ಸಾವಿನ ಬಗ್ಗೆ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ.

80 ಕೆಜಿ ಭಾರ ಎತ್ತಿ ದಾಖಲೆ ಬರೆದ 7 ವರ್ಷದ ಬಾಲಕಿ!

LEAVE A REPLY

Please enter your comment!
Please enter your name here