ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಲಿದೆ: ಕುಮಾರಸ್ವಾಮಿ

0
175
Tap to know MORE!

ಕರ್ನಾಟಕದಲ್ಲಿ, ಅದರಲ್ಲೂ ಬಂದು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರು, “ಬೆಂಗಳೂರಿನಲ್ಲಿ ಕನಿಷ್ಠ 20 ದಿನಗಳವರೆಗೆ ಮತ್ತೆ ಲಾಕ್‌ಡೌನ್ ಹೇರಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು ಮತ್ತು ಇದನ್ನು ಮಾಡದಿದ್ದರೆ “ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಲಿದೆ” ಎಂದು ಎಚ್ಚರಿಸಿದರು.

ಮಾಜಿ ಮುಖ್ಯಮಂತ್ರಿಯಾಗಿರುವ ಇವರು, ಟ್ವಿಟರ್‌ ನಲ್ಲಿ, “ಜನರ ಆರೋಗ್ಯ ಮುಖ್ಯ, ಆರ್ಥಿಕತೆಯಲ್ಲ” ಎಂದು ಹೇಳಿದ್ದಾರೆ.

“ಜನರ ಜೀವನದೊಂದಿಗೆ ಆಟವಾಡುವುದನ್ನು ನಿಲ್ಲಿಸಿ. ಕೇವಲ ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಉಪಯುಕ್ತವಲ್ಲ. ಬೆಂಗಳೂರು ತಕ್ಷಣ, ಕನಿಷ್ಠ 20 ದಿನಗಳವರೆಗೆ ಲಾಕ್‌ಡೌನ್‌ಗೆ ಹೋಗಬೇಕು. ಇಲ್ಲದಿದ್ದರೆ ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

“ಬಡವರಿಗೆ ಮತ್ತು ಕಾರ್ಮಿಕರಿಗೆ ಪಡಿತರವನ್ನು ವಿತರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ರಾಜ್ಯದ 50 ಲಕ್ಷ ಕಾರ್ಮಿಕ ವರ್ಗಕ್ಕೆ ತಲಾ 5,000 ರೂ.ಗಳ ಪರಿಹಾರವನ್ನು ನೀಡಬೇಕಾಗಿದೆ. ಅಲ್ಲದೆ, ಅನೇಕ ಚಾಲಕರು, ನೇಕಾರರು ಮತ್ತು ಕಾರ್ಮಿಕರು ರಾಜ್ಯ ಸರ್ಕಾರವು ಘೋಷಿಸಿದ ಯೋಜನೆಗಳ ಪ್ರಯೋಜನಗಳನ್ನು ಇನ್ನೂ ಪಡೆದಿಲ್ಲ” ಎಂದರು.

LEAVE A REPLY

Please enter your comment!
Please enter your name here