ಬೆಂಗಳೂರು ಲಾಕ್ಡೌನ್ ಬಗ್ಗೆ ನಾಳೆ ಮಹತ್ವದ ನಿರ್ಧಾರ

0
149
Tap to know MORE!

ಬೆಂಗಳೂರು: ಕರ್ನಾಟಕದ ರಾಜಧಾನಿಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೊರೊನಾ ನಿಯಂತ್ರಣ ಕಷ್ಟವಾಗಿದೆ. ಈಗಾಗಲೇ ನಿಗಧಿಯಾದ ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಹಾಸಿಗೆಗಳ ಕೊರತೆಯಿದ್ದು ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುವಂತಾಗಿದೆ. ಇನ್ನು ಹಲವೆಡೆ ಬೆಳಕಿಗೆ ಬಾರದ ಹಲವಾರು ಪ್ರಕರಣಗಳು ಇವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ನಿಟ್ಟಿನಲ್ಲಿ ಸರಕಾರಕ್ಕೆ ಬೆಂಗಳೂರನ್ನು ಲಾಕ್ ಡೌನ್ ಮಾಡುವ ಅಗತ್ಯತೆ ಇದೆಯಾದರೂ ಶ್ರಮಿಕ ವರ್ಗದಿಂದ ವಿರೋಧ ವ್ಯಕ್ತವಾಗುತ್ತಿದೆ. ಆಟೋ ಚಾಲಕರು, ಬೀದಿ ಬದಿಯ ವ್ಯಾಪಾರಿಗಳು ಲಾಕ್ ಡೌನ್ ನಿಂದ ಅದಯವಿಲ್ಲದೆ ಪರಿದಾಡುವ ಸ್ಥಿತಿ ಉಂಟಾಗಬಹುದೆಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೂಡ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್ ಡೌನ್ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಲಾಕ್ ಡೌನ್ ಮಾಡುವುದೇ ಬೇಡವೇ ಅಥವಾ ಯಾವ ರೀತಿಯಾಗಿ ಇದನ್ನು ನಿಭಾಯಿಸಬೇಕೆಂಬ ಮುಖ್ಯ ನಿರ್ಧಾರಗಳು ನಾಳಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗಲಿದೆ

LEAVE A REPLY

Please enter your comment!
Please enter your name here