ಬೆಂಗಳೂರಿನಲ್ಲಿ ನಾಳೆ ರಾತ್ರಿಯಿಂದ ಲಾಕ್ಡೌನ್ ಜಾರಿಗೊಳ್ಳಲಿದ್ದು, ಅದಕ್ಕೆ ಸರ್ಕಾರದಿಂದ ಮಾರ್ಗಸೂಚಿಗಳು ಇಂದು ಪ್ರಕಟಗೊಂಡವು. ಬೆಂಗಳೂರು ಸಂಪೂರ್ಣ ಲಾಕ್ಡೌನ್ ಹೋಗುತ್ತಿಲ್ಲ ಎಂಬುವುದು ಸ್ಪಷ್ಟ.
ಇವುಗಳು ಇರಲ್ಲ :
- ಶಾಲಾ-ಕಾಲೇಜುಗಳಗಳು
- ಟ್ಯಾಕ್ಸಿಗಳು, ಆಟೋ ರಿಕ್ಷಾ ಮತ್ತು ಕ್ಯಾಬ್ ಸೇವೆಗಳು (ಅಗತ್ಯ ಸೇವೆಗೆ ಅವಕಾಶ)
- ಮೆಟ್ರೋ ರೈಲು ಸೇವೆಗಳು
- ಹೋಟೆಲ್ ಗಳು, ರೆಸ್ಟೋರೆಂಟ್ ಮತ್ತು ಇತರೆ ಆತಿಥ್ಯ ಸೇವೆಗಳು
- ಸಿನಿಮಾ, ಮಾಲ್, ಮಂದಿರ, ಶಾಪಿಂಗ್ ಮಾಲ್, ಜಿಮ್ನಾಷಿಯನ್, ಸ್ಟೇಡಿಯಂ, ಈಜುಕೊಳ, ರಂಗ ಮಂದಿರ, ಬಾರ್, ಆಡಿಟೋರಿಯಂ, ಸಭಾ ಭವನ
- ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು ಬಂದ್
- ಹೊಸ ವಿಮಾನ, ರೈಲು ಸಂಚಾರಕ್ಕೆ ಅವಕಾಶ ಇಲ್ಲ
- ಈಗಾಗಲೇ ಟಿಕೆಟ್ ಪಡೆದವರು ವಿಮಾನ ನಿಲ್ದಾಣಕ್ಕೆ ತೆರಳಲು ಅವಕಾಶ, ಬೇರಾವುದಕ್ಕೂ ಅವಕಾಶ ಇಲ್ಲ
ಇವುಗಳು ಇರುತ್ತೆ! ( ಕಂಟೈನ್ಮೆಂಟ್ ವಲಯ ಹೊರತು ಪಡಿಸಿ)
ಈ ಮಾರ್ಗ ಸೂಚಿಯಲ್ಲಿ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಂಟೈನ್ಮೆಂಟ್ ವಲಯ ಹೊರತು ಪಡಿಸಿ, ಪಡಿತ ಅಂಗಡಿಗಳು, ದಿನಸಿ ಅಂಗಡಿಗಳು ಸೇರಿದಂತೆ ಆಹಾರ, ದವಸ, ಧಾನ್ಯ, ಹಣ್ಣುಗಳು ಹಾಗೂ ತರಕಾರಿ, ಹೈನು, ಕ್ಷೀರ ಕೇಂದ್ರಗಳು, ಮಾಂಸ, ಮೀನು, ಪ್ರಾಣಿಯ ಆಹಾರ ಅಂಗಡಿಗಳು ತೆರೆಯಲು ಅವಕಾಶ ಮತ್ತು ಡೆಲಿವರಿ ಕೊಡಲು ಅನುಮತಿ ನೀಡಲಾಗಿದೆ.
- ಕೋವಿಡ್-19 ಕಾರ್ಯಕ್ಕೆ ಸಂಬಂಧಿಸಿದ ನಿಯೋಜಿತ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು
- ಎಲ್ಲಾ ಆರೋಗ್ಯ ಸೇವೆಗಳು
- ಎಲ್ಲಾ ಫಾರ್ಮಸಿಟಿಕಲ್ ಹಾಗೂ ರಿಸರ್ಚ್ ಲ್ಯಾಬ್ ಗಳು
- ಔಷಧಿ, ಔಷಧೀಯ ವೈದ್ಯಕೀಯ ಸಾಧನಗಳು, ಮೆಡಿಕಲ್ ಆಕ್ಸಿಜನ್ ತಯಾರಿಕಾ ಘಟಕಗಳು
- ಕೃಷಿ ಹಾಗೂ ಕೃಷಿಗೆ ಸಂಬಂಧಿತ ಚಟುವಟಿಕೆಗಳು
- ಮೀನುಗಾರಿಕೆ
- ಮೊಟ್ಟೆ ಕೇಂದ್ರಗಳು
- ಪಶು ಸಂಗೋಪನಾ ಇಲಾಖೆ
- ಕ್ಷೀರ ಸಂಸ್ಕರಣ ಕೇಂದ್ರಗಳು
- ಕೋಳಿ ಸಾಗಾಣಿಕಾ ಕೇಂದ್ರಗಳು
- ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕ ದಳ, ನಾಗರೀಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಬಿಬಿಎಂಪಿ ಹಾಗೂ ಕಾರಾಗೃಹಗಳು
- ವಿದ್ಯುತ್, ನೀರು, ನೈರ್ಮಲ್ಯ ಇತ್ಯಾದಿ ಅಗತ್ಯ ಸೇವೆಗಳನ್ನು ನಿರ್ವಹಿಸುವಂತ ಎಲ್ಲಾ ಕಚೇರಿಗಳು
- ಬಿಬಿಎಂಪಿ ಹಾಗೂ ಅಧೀನ ಕಚೇರಿಗಳು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಅಧೀನ ಕಚೇರಿಗಳು
- ವಿಧಾನ ಸೌಧ, ವಿಕಾಸ ಸೌಧ ಹಾಗೂ ಬಹುಮಹಡಿ ಕಟ್ಟಗಳಲ್ಲಿರುವ ಕಚೇರಿಗಳು ಶೇ.50ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಿಸುವುದು.
- ನ್ಯಾಯಾಲಯ, ನ್ಯಾಯಾಂಗ ಕೆಲಸಗಳಿಗೆ ಸಂಬಂಧಿಸಿದ ಕಚೇರಿಗಳು, ಮಾನ್ಯ ಉಚ್ಛ ನ್ಯಾಯಾಲಯವು ಹೊರಡಿಸಿರು ಮಾರ್ಗಸೂಚಿಗಳನ್ವಯ ಕಾರ್ಯ ನಿರ್ವಹಿಸತಕ್ಕದ್ದು.
- ರಾಜ್ಯ ಹುಜೂರ್ ಖಜಾನೆ ಹಾಗೂ ಅಧೀನದ ಜಿಲ್ಲಾ ಖಜಾನೆಗಳು
- ರಕ್ಷಣೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ದೂರ ಸಂಪರ್ಕ
- ಅಗತ್ಯ ಸೇವೆಗಳನ್ನು ನಿರ್ವಹಿಸುವಂತ ಕಚೇರಿಗಳು
- ರಾಷ್ಟ್ರೀಯ ಮಾಹಿತಿ ಕೇಂದ್ರಗಳು
- ವಿಮಾನ ನಿಲ್ದಾಣ, ಭೂ ಗಡಿ, ಕಸ್ಟಮ್ ಗಳು
- ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್