ಬೆಂಗಳೂರು, ಹೈದರಾಬಾದ್ ಹಾಗೂ ಪುಣೆ ಕೋವಿಡ್ ಹಾಟ್ ಸ್ಪಾಟ್ ನಗರಗಳು

0
153
Tap to know MORE!

ನವದೆಹಲಿ: ಭಾರತದ ಒಂಬತ್ತು ಅತಿದೊಡ್ಡ ನಗರ ಕೇಂದ್ರಗಳಲ್ಲಿ (5 ಮಿಲಿಯನ್ ಜನಸಂಖ್ಯೆ ಹೊಂದಿರುವ), ಈಗ ಬೆಂಗಳೂರು, ಹೈದರಾಬಾದ್ ಮತ್ತು ಪುಣೆಗಳಲ್ಲಿ ಕೋವಿಡ್ ಪ್ರಕರಣಗಳು ಅತ್ಯಂತ ವೇಗವಾಗಿ ಏರುತ್ತಿವೆ. ಆದರೆ ಹಿಂದಿನ ಹಾಟ್ ಸ್ಪಾಟ್ ಗಳಾದ ಮುಂಬೈ, ದೆಹಲಿ, ಚೆನ್ನೈ ಮತ್ತು ಅಹಮದಾಬಾದ್ ನಲ್ಲಿ ಪ್ರಕರಣಗಳು ಚಿಹ್ನೆಗಳು ನಿಧಾನವಾಗುತ್ತಿವೆ.

ಕಳೆದ ನಾಲ್ಕು ವಾರಗಳಲ್ಲಿ ಪ್ರಕರಣಗಳು ದಿನಕ್ಕೆ ಸರಾಸರಿ 12.9% ರಷ್ಟು ಹೆಚ್ಚಿರುವ ಬೆಂಗಳೂರು ಪ್ರಕರಣಗಳಲ್ಲಿ ಅತಿ ಹೆಚ್ಚು ಹೆಚ್ಚಳ ಕಂಡ ನಗರ. ನಗರವು ಇದೇ ಅವಧಿಯಲ್ಲಿ ಸಾವಿನ ಪ್ರಮಾಣವು ದಿನಕ್ಕೆ 8.9% ರಷ್ಟಿದೆ. ಪ್ರತಿ ನೂರು ಪ್ರಕರಣದ ಸಾವಿನ ಪ್ರಮಾಣದಲ್ಲಿ ಅಹಮದಾಬಾದ್ ಮೊದಲ ಸ್ಥಾನದಲ್ಲಿದೆ. ಮುಂಬೈ ಮತ್ತು ಕಲ್ಕತ್ತಾ ನಂತರದ ಸ್ಥಾನದಲ್ಲಿದೆ.

ಚೆನ್ನೈನಲ್ಲಿ ಅತೀ ಹೆಚ್ಚು ಜನಸಂಖ್ಯೆ ಇದ್ದು ಪ್ರಕರಣದ ಸಾಂದ್ರತೆಯೂ ಇಲ್ಲಿ ಹೆಚ್ಚಾಗಿದೆ. ಮುಂಬೈ , ಪುಣೆ ಮತ್ತು ದೆಹಲಿ ಪ್ರಕರಣಗಳ ಸಾಂದ್ರತೆಯಲ್ಲಿ ನಂತರದ ಸ್ಥಾನಗಳಲ್ಲಿದೆ. ಮುಂಬೈನಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 345 ಸಾವು ಸಂಭವಿಸುತ್ತಿದೆ.

LEAVE A REPLY

Please enter your comment!
Please enter your name here