ಬೆಂಗಳೂರು ಹೊರತು ಪಡಿಸಿ ರಾಜ್ಯದಲ್ಲಿ ನಿಯಂತ್ರಣಕ್ಕೆ ಬಂದ ಕೊರೋನಾ!

0
77

ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ ಎಂದುಕೊಳ್ಳುತ್ತಿರುವಾಗ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ತಾಂಡವ ಶುರು ಮಾಡಿದೆ. ಇಂದು ಇಡೀ ರಾಜ್ಯದಲ್ಲಿ 249 ಹೊಸ ಸೋಂಕಿತರ ಪತ್ತೆಯಾಗಿದೆ. ಅವುಗಳ ಪೈಕಿ ಅರ್ಧದಷ್ಟು, ಬೆಂಗಳೂರು ನಗರವೊಂದರಲ್ಲೇ ಬೆಳಕಿಗೆ ಬಂದಿದೆ.

ರಾಜ್ಯವೇ ನಿಟ್ಟುಸಿರು ಬಿಟ್ಟರೂ, ಬೆಂಗಳೂರಿನಲ್ಲಿ ಸತತ ಎರಡನೇ ದಿನ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ. ಬೇರೆ ಯಾವ ಜಿಲ್ಲೆಗಳಲ್ಲೂ ಹೊಸ ಸೋಂಕಿತರ ಸಂಖ್ಯೆ 30ನ್ನು ಕೂಡ ದಾಟಲಿಲ್ಲ. ಕಲಬುರ್ಗಿ (27) ಮತ್ತು ವಿಜಯಪುರ (15) ನಂತರದ ಸ್ಥಾನದಲ್ಲಿದೆ.

ಇದೇ ವೇಳೆ, ಇಂದು 111 ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು ಬೆಂಗಳೂರಿನಲ್ಲಿ ಮೂವರು ಸೇರಿದಂತೆ ರಾಜ್ಯದಲ್ಲಿ ಒಟ್ಟು ಐವರು ಸೋಂಕಿಗೆ ಬಲಿಯಾಗಿದ್ದಾರೆ

LEAVE A REPLY

Please enter your comment!
Please enter your name here