ಬೆಳಗಾವಿ : ನಂಬರ್ ಪ್ಲೇಟ್‌ ಕನ್ನಡದಲ್ಲಿ ಬರೆಸಿದ್ದರಿಂದ ದಂಡ ವಿಧಿಸಿದ ಪೋಲೀಸರು!

0
186
Tap to know MORE!

ಬೆಳಗಾವಿ: ಒಂದು ಬೈಕ್‌ನ ನಂಬರ್‌ ಪ್ಲೇಟ್‌ನಲ್ಲಿ ಅಂಕಿಗಳು ಕನ್ನಡದಲ್ಲಿದ್ದ ಕಾರಣಕ್ಕೆ, ಇಲ್ಲಿನ ಸಂಚಾರ ಪೊಲೀಸರು ಸವಾರನಿಗೆ ₹ 500 ದಂಡ ವಿಧಿಸಿದ್ದಾರೆ.

ನಗರದ ಜೀಜಾಮಾತಾ ವೃತ್ತದ ಬಳಿ ಈ ಘಟನೆ ನಡೆದಿದೆ. ಪೋಲೀಸರು ‘ದೋಷಪೂರಿತ ನಂಬರ್‌ ಪ್ಲೇಟ್’ ಎಂದು ನಮೂದಿಸಿ, ಸವಾರನ ಮೇಲೆ ದಂಡ ವಿಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ನೂರಾರು ಮರಾಠಿ ಯುವಕರು ಕರ್ನಾಟಕ ಮತ್ತು ಕನ್ನಡಿಗರನ್ನು ಕೆಣಕುವ, ಕರ್ನಾಟಕ ವಿರೋಧಿ ಘೋಷಣೆಗಳನ್ನು ತಮ್ಮ ಕಾರು ಮತ್ತು ಬೈಕುಗಳಲ್ಲಿ ಬರೆಸಿಕೊಂಡು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಇಂಥ ಎಷ್ಟು ವಾಹನಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ?’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಕೇಳಿದ್ದಾರೆ.

‘ಕನ್ನಡದ ಅಂಕಿ ಬರೆದಿದ್ದಕ್ಕೆ ದಂಡ ಹಾಕಿರುವುದು ಏಕೆಂದು ಅರ್ಥವಾಗುವುದಿಲ್ಲ. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಕನ್ನಡ ಅನುಷ್ಠಾನದ ಹೊಣೆ ಹೊತ್ತಿರುವ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here