ಕರ್ನಾಟಕ ರಾಜ್ಯ ಸರ್ಕಾರವು ಲಾಕ್ಡೌನ್ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಿದೆ. ಸರ್ಕಾರವು ತನ್ನ ಹೊಸ ಆದೇಶದಲ್ಲಿ, ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಬೆಳಿಗ್ಗೆ 5 ರಿಂದ ರಾತ್ರಿ 9 ರವರೆಗೆ ಉದ್ಯಾನವನಗಳನ್ನು ತೆರೆಯಬಹುದು ಎಂದು ಆದೇಶಿಸಿದೆ. ಉದ್ಯಾನದ ಸಮಯವನ್ನು ಸ್ಥಳೀಯ ನಗರ ಅಥವಾ ಪುರಸಭೆ ನಿಗಮಗಳು ನಿರ್ಧರಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಸ್ತುತ, ಸಾರ್ವಜನಿಕ ಉದ್ಯಾನವನಗಳನ್ನು ಬೆಳಿಗ್ಗೆ 7 ರಿಂದ 9 ರವರೆಗೆ ಮತ್ತು ಸಂಜೆ 4 ರಿಂದ 7 ರವರೆಗೆ ಮಾತ್ರ ತೆರೆಯಲಾಗುತ್ತದೆ.
ಕಂಟೇನ್ಮೆಂಟ್ ವಲಯಗಳಲ್ಲಿ ಲಾಕ್ ಡೌನ್ ವಿಸ್ತರಣೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಮೇ 30 ರಂದು ಹೊಸ ಮಾರ್ಗಸೂಚಿಯ ಆದೇಶವನ್ನು ಹೊರಡಿಸಿತ್ತು. ಆ ಆದೇಶದಲ್ಲಿ ಕೇಂದ್ರ ಗೃಹ ಸಚಿವಾಲಯವು ಕಂಟೇನ್ಮೆಂಟ ವಲಯಗಳನ್ನು ಹೊರತುಪಡಿಸಿ ಇತರ ವಲಯಗಳಲ್ಲಿ ಹಂತಹಂತವಾಗಿ ಸಾಮಾನ್ಯ ಜೀವನಕ್ಕೆ ಮರಳಲು ಅವಕಾಶವನ್ನು ನೀಡಿತ್ತು. ಅದರಂತೆ ರಾಜ್ಯ ಸರ್ಕಾರ ಕೂಡ ಆದೇಶಗಳನ್ನು ಕೈಗೊಂಡಿದೆ.