ಬೆಳ್ತಂಗಡಿ: ಶನಿವಾರ ಮುಂಜಾನೆಯಿಂದ ನಿರಂತರ ಮಳೆಯಾಗುತ್ತಿರುವ ಪರಿಣಾಮ ಸೆ.20 ರಂದು ತಾಲೂಕಿನಾದ್ಯಂತ 150.74ಮಿ.ಮೀ. ಮಳೆಯಾಗಿದೆ. ತಾಲೂಕಿನಾದ್ಯಂತ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕೆಲವೆಡೆ ನದಿ ಸಮೀಪದ ಕೃಷಿ ಭೂಮಿಗೆ ನೀರು ನುಗ್ಗಿವೆ.
ವೇಣೂರು ಹೊಳೆಯ ಕರೀಮಣೇಲ್ ಖಂಡಿಗ, ಸುದೇಕಾರ್, ಅಂಗರಕರಿಯ ಸೇತುವೆ ತಾಗುವಂತೆ ನೀರು ಹರಿಯುತ್ತಿದೆ. ಪಾಣಿಮೇರು, ಕೊಡಮಾಣಿ ಸುತ್ತಮುತ್ತ ಹೊಳೆಯ ಇಕ್ಕೆಲಗಳಲ್ಲೂ ಅಡಿಕೆ ತೋಟಗಳಿಗೆ ನೀರುನುಗ್ಗಿದ ಪರಿಣಾಮ ತೋಟದಲ್ಲಿ ಬಿದ್ದಿದ್ದ ಅಪಾರ ಪ್ರಮಾಣದ ಅಡಿಕೆ ಹಾಗೂ ತೆಂಗಿನ ಕಾಯಿಗಳು ನೀರುಪಾಲಾಗಿವೆ.