ಬೇಸತ್ತ ಮನವಿಂದು ಮಾಡುವ ಮನವಿಯಿದು

0
187
Tap to know MORE!

ನೀನ್ಯಾಕೆ ಹೀಗೆ…? ನಿನ್ನನ್ನು ಅರ್ಥಮಾಡಿಕೊಂಡೆ… ನಿನ್ನನ್ನು ಕಣ್ಣು ಮುಚ್ಚಿ ನಂಬಿಬಿಟ್ಟಿದ್ದೆ.ಎಲ್ಲರಂತೆ ನನ್ನ ನಲ್ಲ ಅಲ್ಲ… ನೋಯಿಸುವ ಕೆಲ ಹೃದಯಗಳಿದ್ದರೂ ನಾನು ನಂಬಿದ ಮನ ನೋಯಿಸಲು ಅಸಾಧ್ಯ,ನನ್ನ ನೋವಿಗೆ ಸ್ಪಂದಿಸಲು ನನ್ನೊಡನೆ ಇನ್ನೊಂದು ಹೃದಯವಿದೆಯೆಂದು ನಂಬಿದ್ದೆ.ನನ್ನ ನೋವನ್ನು ಅರ್ಥೈಸಿಕೊಂಡು ಇನ್ನೊಮ್ಮೆ ನೋವು ಕೊಡದಂತಹ ಹುಡುಗ ನೀನೆಂದು ಭಾವಿಸಿದ್ದೆ…ಆದರೆ ಆ ಹರನ ಪತ್ನಿ ದಾಕ್ಷಾಯಿಣಿ ಕೂಡ ಇಷ್ಟೊಂದು ಹಿಂಸೆ ಪಟ್ಟಿರಲಾರಳು!

ಎಷ್ಟೊಂದು ಕಟೋರ ನಿನ್ನ ಮನಸ್ಸು? ನೀನು ಎಲ್ಲರಂತಲ್ಲ ಬೀಗಿದ್ದೆ ಮನದೊಳು…ಆದ್ರೆ ನಿನ್ನ ಪ್ರೀತಿಸಿದೊಡೆ ನನ್ನ ಲೆಕ್ಕಾಚಾರ… ಎಲ್ಲಿ ನಾ ತಪ್ಪಿದೆ? ತಿಳಿಯದು.. ಬಹುಶಃ ಎಲ್ಲಾ ಪ್ರೇಮಿಯೂ ತನ್ನ ಪ್ರಿಯಕರನ ಬಗ್ಗೆ ಹೀಗೆ ಅಂದುಕೊಳ್ಳುತ್ತಾರೇನೋ ಅಲ್ವಾ? ನನ್ನ ಹುಡುಗ ಎಲ್ಲರಿಗಿಂತ ಮಿಗಿಲು ಎಂದು..ಆದರೆ ದಿನ ಹೋಗುತ್ತಾ ಹೋಗುತ್ತಾ ನನ್ನ ನಿರೀಕ್ಷೆಗಳ ಕೊಂಡಿ ಒಂದೊಂದೇ ಕಳಚಿ ಬಿತ್ತು.

ಆದರೆ ಅವನ ಬಗ್ಗೆ ತುಂಬಿದ್ದ ಕನಸುಗಳು ನನ್ನ ಮನಸಲ್ಲಿ ಹಚ್ಚಹಸಿರಾಗಿತ್ತು..ನಾ ಹುಟ್ಟಿ ಬೆಳೆದ ಪರಿಸರಕ್ಕೂ ಅವನ ಪ್ರೀತಿಯಲ್ಲಿ ಅಂದು ಬೆಳೆದಿದ್ದ ಪರಿಸರಕ್ಕೂ ಇಂದು ಬೆಳೆಯುತ್ತಿರುವ ಪರಿಸರಕ್ಕೂ ಅದೆಷ್ಟೋ ಅಜಗಜಾಂತರ ವ್ಯತ್ಯಾಸ! ಎಡವುತ್ತಿದ್ದೆ… ಕಲಿಯುತ್ತಿದ್ದೆ…ನೋವಲ್ಲಿ ನಡೆಯುತ್ತಿದ್ದೆ…ಪ್ರತಿ ಹೆಜ್ಜೆಯಲ್ಲೂ ನಿನ್ನಿದ್ದೆ ಅಂದು ಆದ್ರೆ ಇಂದು ನಿನ್ನ ಸ್ವರೂಪವೇ ಬದಲಾಗಿದೆ ನೋಡು… ಎಷ್ಟು ತಿಳಿಸಿ ಹೇಳಿದರು ನಿನಗೆ ನಾನು ಮುಖ್ಯವೆನಿಸಲಿಲ್ಲ ಇಂದು… ಆದ್ರೆ ಭಗವಂತ ಯಾಕಿಷ್ಟು ತಾಳ್ಮೆ, ಸಹನೆ, ತ್ಯಾಗ ಮುಂತಾದ ಮನೋಭಾವನೆಗಳನ್ನು ಹೆಣ್ಣಿಗೆ ಕೊಡುತ್ತಾನೆ ಗೊತ್ತಿಲ್ಲ…ನನಗೆ ಅರ್ಥವಾಗದ ಸಂಗತಿಗಳಲ್ಲಿ ಇದೂ ಒಂದು..

ಆದ್ರೆ ಅಂದು ನೀನು ಹುಡುಗಿಯೊಂದಿಗೆ ಮಾತನಾಡುವಾಗ ನನಗಿದ್ದ ಅಳುಕು ಇಂದು ನೀನು ಯಾರನ್ನು ಬೇಕಾದರೂ ಇಷ್ಟ ಪಡು ನನ್ನ ಬಿಟ್ಟು ಬಿಡು ಎಂಬ ಮಾತು ಹೇಳುತಿದೆ ಯಾಕೆ ಗೊತ್ತಾ? ಬಸಿರು ಹೆಣ್ಣಿನ ಸಂಕಟ…ಭೋರ್ಗರೆವ ಹೆರಿಗೆ ಸಂಕಟದ ನೋವಿಗಿಂತ ನೀ ಕೊಟ್ಟ ನೋವು ಇದೆಯಲ್ಲಾ ದೊಡ್ಡದು ಗೆಳಯಾ… ಇದು ನನ್ನ ಕಣ್ಣೀರಿನ ಪತ್ರ… ಆದ್ರೆ ನಾನು ಇದಕೆಲ್ಲ ನೀಡುವ ಉತ್ತರವೇನೆಂದರೆ “ಬ್ರೇಕಪ್”… ಕ್ಷಮಿಸಿ ಬಿಡು ನನಗೆ ಈಗ ಯಾವ ಪ್ರೀತಿಯ ಅಗತ್ಯ ಇಲ್ಲ ಯಾಕಂದ್ರೆ ಪ್ರೀತಿ ಏನು ಅನ್ನೋದನ್ನ ನೀ ನೀಡಿದ ನೋವು ನನಗೆ ಅರ್ಥಮಾಡಿಸಿಬಿಟ್ಟಿದೆ… ನನ್ನನು ಬಿಟ್ಟು ಬಿಡು ಇದು ನನ್ನ ಕೋರಿಕೆ… ಗೆಳೆಯಾ ಆದ್ರೂ ಒಂದು ಮನವಿ ನಿನ್ನ ನಂಬಿ ಮುಂದೆ ಬರೋ ಹುಡುಗಿಗೆ ಒಂದು ಬಗೆ ನೋವು ಕೊಡದಿರು.. ಆದ್ರೆ ಅವಳ ಮನಸ್ಸಿನ ಭಾವನೆಗಳಿಗೆ ಸ್ಪಂದಿಸು.. ಇಲ್ಲವಾದಲ್ಲಿ ನನ್ನ ಕಳೆದುಕೊಂಡಂತೆ ಅವಳ ಕಳೆದುಕೊಳ್ಳುವೆ..
“ಕೊನೆಯದಾಗಿ ಇನ್ನಾದರೂ ಚೆನ್ನಾಗಿರು ಗುರು”….

ಇಂಚರ ಗೌಡ

LEAVE A REPLY

Please enter your comment!
Please enter your name here