ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್‌ಗಳಿಗಿದೆ ಸಾಲು ಸಾಲು ರಜೆ!

0
186
Tap to know MORE!

ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕುಗಳು ಸುಮಾರು ಅರ್ಧ ತಿಂಗಳು ಬಂದ್ ಆಗಿರಲಿದೆ. ಈಗೆಲ್ಲಾ ಕ್ಷಣಮಾತ್ರದಲ್ಲಿ, ಮನೆಯಲ್ಲಿಯೇ ಕುಳಿತು ಬ್ಯಾಂಕ್ ವ್ಯವಹಾರಗಳನ್ನು ಮಾಡಬಹುದು. ಕೆಲವೊಂದು ಸನ್ನಿವೇಶಗಳಲ್ಲಿ ಮಾತ್ರ, ಕೆಲವು ಬ್ಯಾಂಕಿಂಗ್ ವ್ಯವಹಾರಗಳಿಗೆ ಬ್ಯಾಂಕ್ ಶಾಖೆಗೆ ಹೋಗಬೇಕಾಗುತ್ತದೆ. ಅಲ್ಲಿಂದಲೇ ಎಲ್ಲ ಕೆಲಸ ಆಗಬೇಕು ಎಂಬ ಕಡ್ಡಾಯ ಇಲ್ಲ. ಆದರೂ ವ್ಯವಹಾರಗಳನ್ನು ಮಾಡುವವರಿಗೆ ಪ್ರತಿ ತಿಂಗಳ ಬ್ಯಾಂಕ್ ರಜಾ ದಿನಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಇದೀಗ ಅಕ್ಟೋಬರ್ ತಿಂಗಳ ರಜಾ ದಿನಗಳ ಬಗ್ಗೆ ಮಾಹಿತಿ ದೊರಕಿದ್ದು, ಸುಮಾರು 14 ದಿನಗಳ ಕಾಲ ಬ್ಯಾಂಕ್‌ಗೆ ರಜೆ ಇರಲಿದೆ. ಸಾರ್ವಜನಿಕ ಬ್ಯಾಂಕ್ ಇರಲಿ ಅಥವಾ ಖಾಸಗಿಯೇ ಇರಲಿ, ಈ ರಜಾ ದಿನಗಳು ಅನ್ವಯವಾಗುತ್ತದೆ. ಕೆಲವೊಂದು ರಜೆಗಳು ಆಯಾ ರಾಜ್ಯ ಅಥವಾ ಪ್ರದೇಶಗಳಿಗೆ ಸೀಮಿತವಾಗಿರುತ್ತದೆ.

2020ರ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಸಿಗುವ ರಜಾ ದಿನಗಳ ಪಟ್ಟಿ ಹೀಗಿದೆ:

 • ಅ. 2: ಶುಕ್ರವಾರ- (ಗಾಂಧೀ ಜಯಂತಿ)
 • ಅ. 4: ಭಾನುವಾರ- (ಸಾರ್ವಜನಿಕ ರಜಾ)
 • ಅ. 8: ಗುರುವಾರ- ಚೆಲ್ಲಂ (ಪ್ರಾದೇಶಿಕ ರಜಾ)
 • ಅ. 10: ಶನಿವಾರ- (ಎರಡನೇ ಶನಿವಾರ)
 • ಅ. 11: ಭಾನುವಾರ- (ಸಾರ್ವಜನಿಕ ರಜಾ)
 • ಅ. 17: ಶನಿವಾರ- ಅಸ್ಸಾಂನಲ್ಲಿ ಕತಿ ಬಿಹು
 • ಅ. 18: ಭಾನುವಾರ (ಸಾರ್ವಜನಿಕ ರಜಾ)
 • ಅ. 23: ಶುಕ್ರವಾರ- ಮಹಾಸಪ್ತಮಿ (ಪ್ತಾದೇಶಿಕ ರಜಾ)
 • ಅ. 24: ಶನಿವಾರ- ಮಹಾಷ್ಟಮಿ (ಪ್ರಾದೇಶಿಕ ರಜಾ)
 • ಅ. 25: ಭಾನುವಾರ- (ಸಾರ್ವಜನಿಕ ರಜಾ)
 • ಅ. 26: ಸೋಮವಾರ- ವಿಜಯ ದಶಮಿ
 • ಅ. 29: ಗುರುವಾರ- ಮಿಲಾದ್ ಇ ಶರೀಫ್ (ಪ್ರಾದೇಶಿಕ ರಜಾ)
 • ಅ. 30: ಶುಕ್ರವಾರ- ಈದ್ ಮಿಲಾದ್
 • ಅ. 31: ಶನಿವಾರ- ಮಹರ್ಷಿ ವಾಲ್ಮೀಕಿ, ಸರ್ದಾರ್ ಪಟೇಲ್ ಜಯಂತಿ (ಪ್ರಾದೇಶಿಕ ರಜಾ)

ಬ್ಯಾಂಕ್​ಗಳಲ್ಲಿ ಪ್ರತಿ ಭಾನುವಾರ, ಎರಡನೇ ಶನಿವಾರ, ನಾಲ್ಕನೇ ಶನಿವಾರ ಖಾಯಂ ಆಗಿ ರಜೆ ಇರುತ್ತದೆ. ಇದನ್ನು ಹೊರತು ಪಡಿಸಿ, ಕರ್ನಾಟಕದಲ್ಲಿ ಅಕ್ಟೋಬರ್ ತಿಂಗಳಲ್ಲಿ 4 ರಜೆಗಳಿವೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ, ಅಕ್ಟೋಬರ್ 26ರಂದು ವಿಜಯದಶಮಿ, ಅ. 30ರಂದು ಈದ್​ ಮಿಲಾದ್, ಅ. 31ರಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮ ದಿನಾಚರಣೆ/ ವಾಲ್ಮೀಕಿ ಜಯಂತಿ ಇರಲಿದೆ.

ಈ ದಿನಗಳಲ್ಲಿ ಆನ್​ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್​ಗೆ ಮಾತ್ರ ಅವಕಾಶ ಇರಲಿದೆ. ಎಟಿಎಂಗಳಲ್ಲಿ ಹಣ ಖಾಲಿಯಾಗುವ ಸಾಧ್ಯೆತಯೂ ಇರುವುದರಿಂದ ಸ್ವಲ್ಪ ಹೆಚ್ಚು ಹಣವನ್ನು ಡ್ರಾ ಮಾಡಿಟ್ಟುಕೊಳ್ಳುವುದು ಒಳಿತು.

LEAVE A REPLY

Please enter your comment!
Please enter your name here