ಹಾಸನ : ಕರ್ನಾಟಕವು ಆಂಧ್ರ ತೆಲಂಗಾಣದಂತೆ ಒಡೆದು ಹೋಳಾಗುತ್ತದೆ. ಬೆಳಗಾವಿ ಉತ್ತರ ಕರ್ನಾಟಕದ ಕೇಂದ್ರವಾದರೆ, ಬೆಂಗಳೂರು ದಕ್ಷಿಣದ ರಾಜಧಾನಿಯಾಗಿರುತ್ತದೆ ಎಂದು ಬ್ರಹ್ಮಾಂಡ ಗುರೂಜಿ ಶ್ರೀ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.
ಗುರುವಾರ ಹಾಸನಾಂಬೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರ ರಾಜಕೀಯದ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. “ಕರ್ನಾಟಕದಲ್ಲಿ ವರ್ಷಾಂತ್ಯದಲ್ಲಿ ಸಿಎಂ ಕೂಡ ಬದಲಾಗುತ್ತಾರೆ. ಮುಖ್ಯಮಂತ್ರಿ ಹುದ್ದೆ, ಯಡಿಯೂರಪ್ಪನವರಿಗೆ ಈ ವರ್ಷಾಂತ್ಯದ ವರೆಗೆ ಮಾತ್ರ. ಅವರ ಜಾಗದಲ್ಲಿ ಇನ್ನೊಬ್ಬರು ಕೂರಲಿದ್ದಾರೆ” ಎಂದು ಹೇಳಿದರು.
“೨೦೨೪ರಲ್ಲಿ ಬಿಜೆಪಿಯೇ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಆದರೆ, ಪ್ರಧಾನಿಯಾಗಿ ಮೋದಿಯವರು ಮುಂದುವರಿಯುವ ಸಾಧ್ಯತೆ ಕಡಿಮೆ. ಅವರು ಇತ್ತೀಚಿನ ದಿನಗಳಲ್ಲಿ ವೈರಾಗ್ಯದ ಕಡೆಗೆ ಆಸಕ್ತಿ ತೋರಿಸುತ್ತಿದ್ದಾರೆ” ಎಂದಿದ್ದಾರೆ
ಪ್ರಪಂಚ ಇನ್ನೂ 3 ವರ್ಷ ಸಂಕಷ್ಟಗಳನ್ನು ಎದುರಿಸಬೇಕಾಗಿದ್ದು, ಮೂರನೇ ಮಹಾಯುದ್ಧ ಆಗುವುದು ಶತಸಿದ್ಧ, ಸ್ತ್ರೀಯರು ಜಗತ್ತನ್ನು ಆಳಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.