ಭಾರತದಲ್ಲಿ ಕ್ರಾಂತಿಯ ಕಿಡಿ ಬೆಳಗಿದ ವೀರ – ಭಗತ್ ಸಿಂಗ್

0
146
Tap to know MORE!

ಭಾರತದಲ್ಲಿ ಕ್ರಾಂತಿಯ ಕಿಡಿ ಬೆಳಗಿದ ವೀರ
ಆಂಗ್ಲರ ನೆಲಕಚ್ಚುವಂತೆ ಮಾಡಿದ ಶೂರ
ಯುವ ಮನಸ್ಸುಗಳಿಗೆ ದೇಶಭಕ್ತಿಯ ತುಂಬಿದ ಸರದಾರ
ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಧೀರ

ನಿಮ್ಮ ದೇಶಪ್ರೇಮದ ಒಲವಿನ ಮನಸ್ಸು
ಸ್ವಾತಂತ್ರ್ಯ ಪಡೆದಿರುವೆ ಎಂಬ ಕನಸ್ಸು
ಕನಸ್ಸ ನನಸ್ಸು ಮಾಡಿದರು ನಂತರದ ನಾಯಕರು
ಭಾರತಾಂಬೆಯ ನೆಚ್ಚಿನ ಸೇವಕರು ಸುಪುತ್ರರು

ಗಲ್ಲಿಗೆ ಇರುವಾಗಲೂ ಅಂಜದ ಗುಂಡಿಗೆ
ಎಂಥಹಾ ಗಟ್ಟಿತನ ನಿಮ್ಮ ತನುವಿನೊಳಗೆ
ತಾಯಿನಾಡಿಗೆ ಕೊಟ್ಟ ಅಮೂಲ್ಯ ಕೊಡುಗೆ
ಆ ಕ್ರಾಂತಿಯ ಕಿಡಿಯು ಕೊಂಡೊಯ್ಯಿತು ಸ್ವಾತಂತ್ರ್ಯದ ಕಡೆಗೆ

ಗಿರೀಶ್ ಪಿಎಂ
ವಿವಿ ಕಾಲೇಜ್ ಮಂಗಳೂರು

LEAVE A REPLY

Please enter your comment!
Please enter your name here