ಭಗವದ್ಗೀತೆಯಲ್ಲಿ ನಾವು ಶಾಂತಿ-ನೆಮ್ಮದಿಯನ್ನು ಕಾಣಬಹುದು : ಅಮೇರಿಕಾ ಸಚಿವೆ

0
147
Tap to know MORE!

ಎಲ್ಲವೂ ಅಸ್ತವ್ಯಸ್ತವಾಗಿರುವ ಈ ಸಮಯದಲ್ಲಿ ನಾವು ಭಗವದ್ಗೀತೆಯಲ್ಲಿ ನಿಶ್ಚಿತತೆ, ಶಕ್ತಿ ಮತ್ತು ಶಾಂತಿಯನ್ನು ಕಾಣಬಹುದು ಎಂದು ಅಮೆರಿಕದ ಮೊದಲ ಹಿಂದೂ ಸಚಿವೆ ತುಳಸಿ ಗಬ್ಬಾರ್ಡ್ ಹೇಳಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ವೀಡಿಯೊ ಸಂವಾದದ ಸಂದರ್ಭ, ಅವರು ನೀಡಿದ ಸಂದೇಶದಲ್ಲಿ, ಇದು ಅಸ್ತವ್ಯಸ್ತವಾಗಿರುವ ಸಮಯ ಮತ್ತು ನಾಳೆ ಹೇಗಿರುತ್ತದೆ ಎಂದು ಯಾರೂ ಖಚಿತವಾಗಿ ಹೇಳಲಾರರು ಎಂದರು

“… ಆದರೆ ಭಗವದ್ಗೀತೆಯಲ್ಲಿ ಕೃಷ್ಣ ನಮಗೆ ಕಲಿಸಿದ ಭಕ್ತಿ ಯೋಗ ಮತ್ತು ಕರ್ಮಯೋಗದಲ್ಲಿ ನಾವು ನಿಶ್ಚಿತತೆ, ಶಕ್ತಿ ಮತ್ತು ಶಾಂತಿಯನ್ನು ಕಾಣುತ್ತೇವೆ” ಎಂದು ಗಬ್ಬಾರ್ಡ್ ಹಾಜರಿದ್ದ ವಿದ್ಯಾರ್ಥಿಗಳಿಗೆ ತಿಳಿಸಿದರು.

ಮಿನ್ನಿಯಾಪೋಲಿಸ್‌ನಲ್ಲಿ ಬಿಳಿ ಪೊಲೀಸ್ ಅಧಿಕಾರಿಯೊಬ್ಬರು ಆಫ್ರಿಕನ್-ಅಮೇರಿಕನ್ ಜಾರ್ಜ್ ಫ್ಲಾಯ್ಡ್‌ರನ್ನು ಹತ್ಯೆಗೈದ ವಿರುದ್ಧ ಅಮೇರಿಕಾದಲ್ಲಿ ನಡೆದ ಪ್ರತಿಭಟನೆಯ ಮಧ್ಯೆ ಅವರ ಈ ಭಾಷಣವು ಬಂದಿತು.

LEAVE A REPLY

Please enter your comment!
Please enter your name here