ಭಾರತಕ್ಕೆ ಕಾಲಿಟ್ಟ ಟೆಸ್ಲಾ | ಬೆಂಗಳೂರಿನಲ್ಲಿ ತನ್ನ ಕಚೇರಿ ತೆರೆಯಲು ಮುಂದಾದ ಅಮೇರಿಕಾದ ಕಂಪನಿ!

0
154
Tap to know MORE!

ಬೆಂಗಳೂರು ಜ.13: ಜಗತ್ತಿನ ಸುಪ್ರಸಿದ್ಧ ಎಲೆಕ್ಟ್ರಿಕ್ ವಾಹನಗಳ ತಯಾರಕಾ ಕಂಪೆನಿಯಾದ ಅಮೆರಿಕ ಮೂಲದ ಟೆಸ್ಲಾ ಕಂಪೆನಿ ಇದೀಗ ಭಾರತದಲ್ಲಿ ತನ್ನ ಕಚೇರಿಯನ್ನು ತೆರೆಯಲು ಮುಂದಾಗಿದೆ. ವಿಶೇಷವೆಂದರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟೆಸ್ಲಾ ತೆರೆಯಲು ಸಜ್ಜಾಗಿದೆ.

ಟೆಸ್ಲಾ ಕಂಪೆನಿ ಭಾರತದ ಕಂಪೆನಿಗಳ ಪಟ್ಟಿಯಲ್ಲಿ ಟೆಸ್ಲಾ ಇಂಡಿಯಾ ಮೋಟಾರ್ಸ್​ ಮತ್ತು ಎನರ್ಜಿ ಪ್ರೈವೇಟ್​ ಲಿಮಿಟೆಡ್ ಎಂದು ಈಗಾಗಲೆ ನೋಂದಾಯಿಸಿಕೊಂಡಿದೆ. ಜನವರಿ 8 ರಂದು ಬೆಂಗಳೂರಿನಲ್ಲಿ ಕಚೇರಿ ತೆರೆಯಲು 15 ಲಕ್ಷ. ರೂ ಆರಂಭಿಕ ಅಧಿಕೃತ ಬಂಡವಾಳವನ್ನೂ ಹೂಡಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.

ಇದನ್ನೂ ಓದಿ: ಪುಟ್ಟ ಹುಡುಗಿಯ ಕ್ಷಮೆಯಾಚಿಸಿದ ಜರ್ಮನ್ ಕಾರು ತಯಾರಕ ಕಂಪನಿ ‘ಆಡಿ’

ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ತೆರೆದು ಹೂಡಿಕೆ ಮಾಡಲು ಮುಂದಾಗಿರುವ ಟೆಸ್ಲಾ ಕಂಪೆನಿಯ ಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸ್ವಾಗತಿಸಿದ್ದಾರೆ.

ಅಲ್ಲದೆ, ಈ ಕುರಿತು ಮಾತನಾಡಿರುವ ಬೃಹತ್ ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್​, “ಟೆಸ್ಲಾ ರಾಜ್ಯದಲ್ಲಿ ತನ್ನ ಕಚೇರಿಯನ್ನು ಸ್ಥಾಪಿಸುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ. ನಾವು ಅದರೊಂದಿಗೆ ಸಹಕರಿಸುತ್ತೇವೆ ಮತ್ತು ಸುಗಮವಾಗಿ ಕಾರ್ಯನಿರ್ವಹಿಸಲು ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಟೆಸ್ಲಾ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಇನ್ನೂ ಯಾವುದೇ ಸ್ಥಳವನ್ನು ಅಂತಿಮಗೊಳಿಸಿಲ್ಲ. ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಸರ್ಕಾರ ಟೆಸ್ಲಾ ಕಂಪೆನಿಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ ಎಂದು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೌರವ್ ಮಾಹಿತಿ ನೀಡಿದ್ದಾರೆ.

2021 ರ ಆರಂಭದಲ್ಲಿ ಟೆಸ್ಲಾ ಭಾರತಕ್ಕೆ ಆಗಮಿಸಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕಳೆದ ಡಿಸೆಂಬರ್‌ನಲ್ಲೇ ಹೇಳಿದ್ದರು. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕೂಡ ಕಳೆದ ವರ್ಷ ಟ್ವಿಟರ್‌ನಲ್ಲಿ ತಮ್ಮ ಕಂಪನಿ 2021 ರಲ್ಲಿ ಭಾರತಕ್ಕೆ ಪ್ರವೇಶಿಸುವುದಾಗಿ ಘೋಷಿಸಿದ್ದರು. ವಿಶ್ವದ ಪ್ರಸಿದ್ಧ ಆಟೋ ಕಂಪನಿ ಎಂದು ಹೆಸರಾಗಿರುವ ಟೆಸ್ಲಾ ಮಾಡೆಲ್ 3 ಜೊತೆಗೆ ಭಾರತಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here