ಭಾರತದಲ್ಲಿ ವ್ಯಾಪಾರ ಚಟುವಟಿಕೆಗಳು ಮರಳಿ ಸಾಮಾನ್ಯ ಮಟ್ಟಕ್ಕೆ ಮರಳುತ್ತಿವೆ ಮತ್ತು ಕೋವಿಡ್ ಪೂರ್ವ ಮಟ್ಟವನ್ನು ವೇಗವಾಗಿ ತಲುಪುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಕೊರೋನಾ ವೈರಸ್ ಹರಡುವುದನ್ನು ತಡೆಯಲು ಸುದೀರ್ಘವಾದ ಲಾಕ್ಡೌನ್ ನಿಂದಾಗಿ ಕೈಗಾರಿಕಾ ಉತ್ಪಾದನೆ ಮತ್ತು ಗ್ರಾಹಕರ ಖರ್ಚಿನ ಮೇಲೆ ತೀವ್ರ ಅಡ್ಡಿ ಉಂಟು ಮಾಡಿತ್ತು.
“ಬಳಕೆ ಮತ್ತು ಬೇಡಿಕೆ ಈಗ ಕೋವಿಡ್ ಪೂರ್ವ ಮಟ್ಟವನ್ನು ತಲುಪುತ್ತಿದೆ” ಎಂದು ಅವರು ಹೇಳಿದರು.
“ಈ ಸೂಚಕಗಳು ಭಾರತೀಯ ಆರ್ಥಿಕತೆಯು ವೇಗವಾಗಿ ಪುಟಿಯಲು ಸಹಕಾರಿಯಾಗುತ್ತದೆ” ಎಂದು ಅವರು ಹೇಳಿದರು. “ಭಾರತವು ಈ ಹಿಂದೆ ದೊಡ್ಡ ಬಿಕ್ಕಟ್ಟುಗಳಿಂದ ಹೊರಬಂದಿದೆ ಮತ್ತು ಅದು ಪ್ರಸ್ತುತದಿಂದಲೂ ಹೊರಬರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ಬೆಳವಣಿಗೆ ಮತ್ತು ಯಶಸ್ಸಿನ ಭರವಸೆ ಇದೆ, ಆಮದು ಕಡಿತಗೊಳಿಸುವ ಮೂಲಕ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ತನ್ನ ಆಲೋಚನೆಯನ್ನು ಪ್ರಚಾರ ಮಾಡಿದರು.
“ಕೆಲವು ವಾರಗಳ ಹಿಂದೆಯೇ, ನಾವು ಎನ್ -95 ಫೇಸ್ ಮಾಸ್ಕ್, ಕೊರೋನಾ ಪರೀಕ್ಷಾ ಕಿಟ್ ಗಳು, ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ) ಮತ್ತು ವೆಂಟಿಲೇಟರ್ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ನಾವು ಸ್ವಾವಲಂಬಿಗಳಾಗಿದ್ದೇವೆ ಮತ್ತು ಕೆಲವು ವೈದ್ಯಕೀಯವನ್ನು ಉಪಕರಣಗಳ ರಫ್ತು ಮಾಡುವ ಸ್ಥಿತಿಯಲ್ಲಿದ್ದೇವೆ , ” ಎಂದು ಅವರು ಹೇಳಿದರು.