ಭಾರತದಲ್ಲಿ ಶೇ.56.69 ಕೊರೋನಾ ಸೋಂಕಿತರು ಗುಣಮುಖ

0
151
Tap to know MORE!

ಭಾರತದಲ್ಲಿ ಸೋಂಕು ಮತ್ತಷ್ಟು ವೇಗದಲ್ಲಿ ಹರಡುತ್ತಿದ್ದರೂ, ಗುಣಮುಖರಾದವರ ಸಂಖ್ಯೆಯೂ ಅದೇ ವೇಗದಲ್ಲಿ ಸಾಗುತ್ತಿದೆ. ಸಕ್ರಿಯ ಪ್ರಕರಣಗಳು ಮತ್ತು ಗುಣಮುಖರಾದವರ ನಡುವಿನ ಅಂತರ ಪ್ರತಿದಿನ ಹೆಚ್ಚುತ್ತಲೇ ಇದೆ ಇದರಿಂದ ನಿಟ್ಟುಸಿರುಬಿಡುವಂತಾಗಿದೆ.

ಮಂಗಳವಾರದ (23 ಜೂನ್) ಅಂತ್ಯದಲ್ಲಿ, ಭಾರತದಲ್ಲಿ ಒಟ್ಟು 2,58,599 ಸೋಂಕಿತರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ ಒಂದು ವಾರದಿಂದ ಪ್ರತಿದಿನ ಸರಿಸುಮಾರು 10,000 ಮಂದಿ ಗುಣಮುಖರಾಗುತ್ತಿದ್ದಾರೆ. ಇದರಿಂದಾಗಿ, ದೇಶದಲ್ಲಿ ಒಟ್ಟು

ಭಾರತದಲ್ಲಿ ಕರೋನವೈರಸ್ ಪ್ರಕರಣಗಳ ಸಂಖ್ಯೆ ಇಂದು 4,56,122 ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 15,653 ಹೊಸ ಪ್ರಕರಣಗಳು ವರದಿಯಾಗಿವೆ. ಅದಲ್ಲದೆ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ, 468 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ, ಒಟ್ಟು ಸಾವಿನ ಸಂಖ್ಯೆ 14,483 ಕ್ಕೆ ಏರಿದೆ. ನಿನ್ನೆಯ ಅಂತ್ಯಕ್ಕೆ, ದೇಶದಲ್ಲಿ 1,82,978 ಸಕ್ರಿಯ ಪ್ರಕರಣಗಳು ದಾಖಲಾಗಿದ್ದರೆ, ಈವರೆಗೆ 2,58,599 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸುಮಾರು 10,462 ರೋಗಿಗಳು ಚೇತರಿಸಿಕೊಂಡಿದ್ದಾರೆ.

1,39,010 ಪ್ರಕರಣಗಳೊಂದಿಗೆ ಮಹಾರಾಷ್ಟ್ರವು ಅತಿ ಹೆಚ್ಚು ಪೀಡಿತ ರಾಜ್ಯವಾಗಿದ್ದರೆ, ದೆಹಲಿ ಮತ್ತು ತಮಿಳುನಾಡು, ಸುಮಾರು 65,000 ಪ್ರಕರಣಗಳೊಂದಿಗೆ, ನಂತರದ ಸ್ಥಾನದಲ್ಲಿದೆ.

LEAVE A REPLY

Please enter your comment!
Please enter your name here