ಭಾರತದಲ್ಲಿ ಹೆಚ್ಚುತ್ತಿರುವ ಕಪ್ಪು ಶಿಲೀಂಧ್ರ ಸೋಂಕು

0
196
Tap to know MORE!

ಕಪ್ಪು ಶಿಲೀಂಧ್ರ ಅಥವಾ ಮ್ಯೂಕಾರ್ಮೈಕೋಸಿಸ್ ನ್ನು ಸಾಂಕ್ರಾಮಿಕ ರೋಗ ಎಂದು ಸೂಚಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚಿಸುತ್ತಿದ್ದಂತೆ, ಬಿಳಿ ಶಿಲೀಂಧ್ರ ಎಂಬ ಸೋಂಕು ಕೆಲವು ಜನರಲ್ಲಿ ಕಂಡುಬಂದಿದೆ.

ಬಿಹಾರದ ಪಾಟ್ನಾದಲ್ಲಿ ಈ ಹೊಸ ಬಿಳಿ ಶಿಲೀಂಧ್ರಪ್ರಕರಣಗಳು ಕಂಡುಬಂದಿವೆ ಮತ್ತು ಈ ಸೋಂಕು ಕಪ್ಪು ಶಿಲೀಂಧ್ರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಪ್ಯಾರಾಸ್ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ಪಲ್ಮೋನಾಲಜಿ ಮುಖ್ಯಸ್ಥ ಡಾ. ಅರುಣೇಶ್ ಕುಮಾರ್ ಹೇಳಿದ್ದಾರೆ.

‘ಈ ಸೋಂಕು ಕಡಿಮೆ ರೋಗನಿರೋಧಕಶಕ್ತಿಯಿಂದಾಗಿ ಉಂಟಾಗಬಹುದು. ಜನರು ವೈರಸ್ ಹೊಂದಿರುವ ವಸ್ತುಗಳೊಂದಿಗೆ ಸಂಪರ್ಕಕ್ಕೆ ಬಂದರೆ ಈ ವೈರಸ್ ಕಾಣಿಸಿಕೊಳ್ಳುತ್ತದೆ, ಹೀಗಾಗಿ ನೈರ್ಮಲ್ಯತೆ ಮುಖ್ಯವಾಗಿದೆ’ ಎಂದು ಅವರು ಸಲಹೆ ನೀಡಿದ್ದಾರೆ.

ಕೋವಿಡ್ ರೋಗಿಗಳು ಬಿಳಿ ಶಿಲೀಂಧ್ರಕ್ಕೆ ಏಕೆ ಒಳಗಾಗುತ್ತಾರೆ?

ವೈದ್ಯರ ಪ್ರಕಾರ, ಕೋವಿಡ್-19 ರೋಗಿಗಳು ಬಿಳಿ ಶಿಲೀಂಧ್ರಕ್ಕೆ ಹೆಚ್ಚು ಒಳಗಾಗುತ್ತಾರೆ ಏಕೆಂದರೆ ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೊರೊನಾ ವೈರಸ್ ರೀತಿಯ ರೋಗಲಕ್ಷಣಗಳು ಸೃಷ್ಟಿಯಾಗುತ್ತವೆ.

‘ಮಧುಮೇಹ, ಕ್ಯಾನ್ಸರ್ ರೋಗಿಗಳಂತಹ ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿರುವವರು ಮತ್ತು ದೀರ್ಘಕಾಲದವರೆಗೆ ಸ್ಟೀರಾಯ್ಡ್ ಗಳನ್ನು ತೆಗೆದುಕೊಳ್ಳುತ್ತಿರುವವರು ಹೆಚ್ಚು ಅಪಾಯದಲ್ಲಿರುವುದರಿಂದ ವಿಶೇಷ ಕಾಳಜಿ ವಹಿಸಬೇಕು. ಇದು ಆಮ್ಲಜನಕದ ಬೆಂಬಲದಲ್ಲಿರುವ ಕೊರೊನಾ ವೈರಸ್ ರೋಗಿಗಳ ಮೇಲೂ ಪರಿಣಾಮ ಬೀರುತ್ತಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here