ಭಾರತದಲ್ಲಿ ಹೆಣ್ಣುಮಕ್ಕಳ ವಿವಾಹ ವಯಸ್ಸು 18 ರಿಂದ 21ಕ್ಕೆ ಏರುವ ಸಾಧ್ಯತೆ

0
171
Tap to know MORE!

ಕಳೆದ ಕೆಲವು ದಶಕಗಳಿಂದ ದೇಶದಲ್ಲಿ ಮದುವೆಯಾಗಲು ಮಹಿಳೆಯರ ಕಾನೂನು ವಯಸ್ಸು ಒಂದು ಕಳವಳವಾಗಿ ಉಳಿದಿದೆ, ಇತ್ತೀಚೆಗಿನ ವರ್ಷಗಳಲ್ಲಿ ಹೆಣ್ಣುಮಕ್ಕಳು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಉತ್ತಮ ವೃತ್ತಿಜೀವನವನ್ನು ಕೂಡ ನಡೆಸುತ್ತಿದ್ದಾರೆ.

1950 ರಲ್ಲಿ ಸ್ವಾತಂತ್ರ್ಯ ಮತ್ತು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ನಂತರ, ಬಾಲ್ಯ ವಿವಾಹ ಕಾಯ್ದೆಯು ಹಲವಾರು ಪರಿಷ್ಕರಣೆಗಳಿಗೆ ಒಳಗಾಗಿದೆ. ಮದುವೆಗೆ ಕನಿಷ್ಠ ಕಾನೂನು ವಯಸ್ಸು, 1978 ರಿಂದ, ಮಹಿಳೆಯರಿಗೆ 18 ಮತ್ತು ಪುರುಷರಿಗೆ 21 ಆಗಿದೆ.

ಫೆಬ್ರವರಿಯಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ “1929 ರ ಹಿಂದಿನ ಶಾರದಾ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಮಹಿಳೆಯರ ವಿವಾಹದ ವಯಸ್ಸನ್ನು 1978 ರಲ್ಲಿ 15 ವರ್ಷದಿಂದ 18 ವರ್ಷಕ್ಕೆ ಹೆಚ್ಚಿಸಲಾಯಿತು. ಭಾರತ ಮತ್ತಷ್ಟು
ಮುಂದುವರೆದಂತೆ, ಮಹಿಳೆಯರಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನವನ್ನು ಮುಂದುವರಿಸಲು ಅವಕಾಶಗಳು ತೆರೆದುಕೊಂಡಿದೆ. ಎಂಎಂಆರ್ (ತಾಯಿಯ ಮರಣ ಪ್ರಮಾಣ) ಮತ್ತು ಪೌಷ್ಠಿಕಾಂಶದ ಮಟ್ಟವನ್ನು ಸುಧಾರಿಸುವುದು ಕಡ್ಡಾಯವಾಗಿದೆ. ಮಾತೃತ್ವಕ್ಕೆ ಪ್ರವೇಶಿಸುವ ಹುಡುಗಿಯರ ವಯಸ್ಸಿನ ಬಗ್ಗೆ ಆಗುತ್ತಿರುವ ಸಂಪೂರ್ಣ ಸಮಸ್ಯೆಯನ್ನು ಈ ಬೆಳಕಿನಲ್ಲಿ ನೋಡಬೇಕಾಗಿದೆ. ಅದರ ಶಿಫಾರಸಿಗಾಗಿ ಕಾರ್ಯಪಡೆಯೊಂದನ್ನು ನೇಮಿಸಲು ನಾನು ಪ್ರಸ್ತಾಪಿಸುತ್ತೇನೆ , ಆರು ತಿಂಗಳ ಒಳಗಾಗಿ ಇದನ್ನು ಪ್ರಸ್ತುತಪಡಿಸಲಿದೆ.

ಇದನ್ನು ಅನುಸರಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (ಡಬ್ಲ್ಯುಸಿಡಿ) ಮಹಿಳೆಯರಿಗೆ ಮದುವೆಯ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ಕ್ಕೆ ಏರಿಸುವ ಸಾಧ್ಯತೆಯನ್ನು ಸೂಚಿಸುತ್ತದೆ.

ಇದನ್ನು ಅನುಸರಿಸಿಕೊಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಯಪಡೆ ಈಗಾಗಲೇ ಸ್ಥಾಪಿತವಾಗಿದೆ. ಮಹಿಳೆಯರ ವಿವಾಹದ ವಯಸ್ಸನ್ನು 18 ರಿಂದ 21ಕ್ಕೆ ಏರಿಸುವ ಘೋಷಣೆ ಶೀಘ್ರವೇ ಆಗುವ ನಿರೀಕ್ಷೆ ಇದೆ ಎಂದು ಹೇಳುತ್ತಿದೆ.

LEAVE A REPLY

Please enter your comment!
Please enter your name here