ಭಾರತದಲ್ಲಿ 1 ಕೋಟಿ ದಾಟಿದ ಕೋವಿಡ್-19 ಪರೀಕ್ಷೆ

0
166
Tap to know MORE!

“ದೇಶಾದ್ಯಂತ ಹೆಚ್ಚುತ್ತಿರುವ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯಿಂದ ಭಾರತವು, ಭಾರತವು ಒಂದು ಕೋಟಿ ಪರೀಕ್ಷಾ ಗಡಿ ದಾಟಲು ಸಾಧ್ಯವಾಯಿತು. ಇದುವರೆಗೆ, ದೇಶಾದ್ಯಂತ 1,105 ಕ್ಕೂ ಹೆಚ್ಚು ಲ್ಯಾಬ್‌ಗಳು ಕೋವಿಡ್ ಪರೀಕ್ಷೆಗಳನ್ನು ನಡೆಸಿ, ಫಲಿತಾಂಶಗಳನ್ನು ನೀಡುತ್ತಿವೆ. ಸರ್ಕಾರಿ ವಲಯದಲ್ಲಿ 788 ಲ್ಯಾಬ್‌ಗಳು ಮತ್ತು 317 ಖಾಸಗಿ ಲ್ಯಾಬ್‌ಗಳಿವೆ ”ಎಂದು ಸಚಿವಾಲಯ ತನ್ನ ವರದಿ ಬಿಡುಗಡೆ ಮಾಡಿದೆ.

ದಿನಾಂಕ 6 ಜುಲೈ 2020 ರಂದು ಭಾರತವು 1 ಕೋಟಿ ಗಡಿಯನ್ನು ದಾಟಿತು. ಅವುಗಳ ಪೈಕಿ, 7 ಲಕ್ಷಕ್ಕೂ ಅಧಿಕರಲ್ಲಿ ಸೋಂಕು ಇರುವುದು ಬೆಳಕಿಗೆ ಬಂದಿದೆ. ಅಂದರೆ, ನಡೆದ ಪರೀಕ್ಷೆಯ ಅಂದಾಜಿನಲ್ಲಿ, ಭಾರತದಲ್ಲಿ ಶೇ.7 ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಭಾರತವು 1 ಕೋಟಿ ಜನರನ್ನು ಪರೀಕ್ಷೆಗೆ ಒಳಪಡಿಸಿರುವ 5 ನೇ ದೇಶವಾಗಿದೆ. ಚೀನಾ (9 ಕೋಟಿ), ಅಮೇರಿಕಾ (3.82 ಕೋ), ರಷ್ಯಾ (2.1 ಕೋ) ಮತ್ತು ಬ್ರಿಟನ್ (1.06 ಕೋ) ಭಾರತಕ್ಕಿಂತಲೂ ಹೆಚ್ಚಿನ ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದ್ದಾರೆ.

ಪ್ರತಿ 10 ಲಕ್ಷ ಜನಸಂಖ್ಯೆಗೆ ಹೋಲಿಸಿದಾಗ ಭಾರತದ ಟೆಸ್ಟಿಂಗ್ ಸಂಖ್ಯೆಯು ಬಹಳ ಕಡಿಮೆ. ಭಾರತಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ಹಲವಾರು ದೇಶಗಳಲ್ಲಿ ಭಾರತಕ್ಕಿಂತ ಹೆಚ್ಚಿನ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ದಿನದಿಂದ ದಿನಕ್ಕೆ ಭಾರತದ ಟೆಸ್ಟಿಂಗ್ ಸಾಮರ್ಥ್ಯ ಹೆಚ್ಚುತ್ತಲೇ ಇದೆ. ಇತ್ತೀಚಿಗೆ, ಪ್ರತಿ ದಿನ ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಜನರನ್ನು ಪರೀಕ್ಷೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ

LEAVE A REPLY

Please enter your comment!
Please enter your name here