ಭಾರತದಲ್ಲಿ $10 ಬಿಲಿಯನ್ ಹೂಡಿಕೆ ಮಾಡಲಿದೆ ಗೂಗಲ್

0
242
Tap to know MORE!

ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಭಾರತದಲ್ಲಿ $10 ಬಿಲಿಯನ್ ಹೂಡಿಕೆ ಮಾಡಲು ಯೋಜಿಸಿದೆ ಎಂದು ಗೂಗಲ್ ಸೋಮವಾರ ತಿಳಿಸಿದೆ. ದೇಶದಲ್ಲಿ ಡಿಜಿಟಲ್ ಸೇವೆಗಳನ್ನು ಅಳವಡಿಸಿಕೊಳ್ಳಲು ಗೂಗಲ್ ಸಹಾಯ ಮಾಡುತ್ತದೆ.

ಗೂಗಲ್‌ನ ಮುಖ್ಯ ಕಾರ್ಯನಿರ್ವಾಹಕ ಸುಂದರ್ ಪಿಚೈ ಅವರು ಇಂದು ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್ ಅನ್ನು ಅನಾವರಣಗೊಳಿಸಿದ್ದು, ಇದರ ಮೂಲಕ ಕಂಪನಿಯು ದೇಶದಲ್ಲಿ ಹೂಡಿಕೆ ಮಾಡಲಿದೆ ಎಂದಿದ್ದಾರೆ.

“ನಾವು ಇದನ್ನು ಈಕ್ವಿಟಿ ಹೂಡಿಕೆಗಳು, ಪಾಲುದಾರಿಕೆಗಳು ಮತ್ತು ಇತರ ಹೂಡಿಕೆಗಳ ಮಿಶ್ರಣದಿಂದ ಮಾಡುತ್ತೇವೆ. ಇದು ಭಾರತದ ಭವಿಷ್ಯ ಮತ್ತು ಅದರ ಡಿಜಿಟಲ್ ಆರ್ಥಿಕತೆಯ ಬಗೆಗಿನ ನಮ್ಮ ವಿಶ್ವಾಸದ ಪ್ರತಿಬಿಂಬವಾಗಿದೆ ”ಎಂದು ಅವರು ಭಾರತದ ಮೇಲೆ ಕೇಂದ್ರೀಕರಿಸಿದ ಕಂಪನಿಯ ವಾರ್ಷಿಕ ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಹೇಳಿದರು.

ಹೂಡಿಕೆಗಳು ನಾಲ್ಕು ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತವೆ:

  • ಹಿಂದಿ, ತಮಿಳು, ಪಂಜಾಬಿ ಅಥವಾ ಇತರ ಯಾವುದೇ ಭಾರತೀಯ ಭಾಷೆಗಳಲ್ಲಿ ಇರಲಿ, ಪ್ರತಿಯೊಬ್ಬ ಭಾರತೀಯನಿಗೂ ತಮ್ಮದೇ ಭಾಷೆಯಲ್ಲಿ ಎಲ್ಲಾ ಮಾಹಿತಿಗಳನ್ನು ಸಿಗುವಂತೆ ಮಾಡುವುದು.
  • ಭಾರತೀಯರ ಅಗತ್ಯಗಳಿಗೆ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ನಿರ್ಮಿಸುವುದು
  • ಬಹುತೇಕ ವ್ಯವಹಾರಗಳಿಗೆ ಡಿಜಿಟಲ್ ರೂಪಾಂತರವನ್ನು ನೀಡಿ, ಅವರಿಗೇ ಅದರ ಅಧಿಕಾರ ನೀಡುವುದು
  • ಆರೋಗ್ಯ, ಶಿಕ್ಷಣ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಸಾಮಾಜಿಕ ಒಳಿತಿಗಾಗಿ ಸದುಪಯೋಗಪಡಿಸಿಕೊಳ್ಳುವುದು

“ನೂರು ಕೋಟಿ ಭಾರತೀಯರಿಗೆ ಇಂಟರ್ನೆಟ್ ಕೈಗೆಟುಕುವಂತೆ ಮತ್ತು ಉಪಯುಕ್ತವಾಗುವಂತೆ ಮಾಡಲು ಇನ್ನೂ ಹೆಚ್ಚಿನ ಕೆಲಸ ಮಾಡಲಿದ್ದೇವೆ ಎಂದು ಭಾರತೀಯ ಮೂಲದ ಅಮೇರಿಕಾ ಪ್ರಜೆ ಸುಂದರ್ ಪಿಚ್ಚೈ ಹೇಳಿದರು.

ಹೂಡಿಕೆಯ ಸಂಪೂರ್ಣ ವಿವರಗಳು :

LEAVE A REPLY

Please enter your comment!
Please enter your name here