ಭಾರತದಲ್ಲಿ 24 ಗಂಟೆಯಲ್ಲಿ ಸುಮಾರು 17,000 ಸೋಂಕಿತರು ಪತ್ತೆ – ಇದುವರೆಗಿನ ಗರಿಷ್ಠ!

0
204
Tap to know MORE!

ಭಾರತದಲ್ಲಿ ನಿನ್ನೆ ಒಂದೇ ದಿನ ಸುಮಾರು 17,000 ಹೊಸ ಕೋವಿಡ್ ಪ್ರಕರಣಗಳ ಪತ್ತೆಯಾಗಿದೆ. ಕಳೆದ 24 ಗಂಟೆಗಳ ಅಂಕಿ ಅಂಶದಲ್ಲಿ ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡು ಶೇಕಡಾ 62 ಕ್ಕಿಂತ ಹೆಚ್ಚಿನ ಕೊಡುಗೆ ನೀಡಿದ್ದು, ದೇಶದ ಒಟ್ಟು ಸೋಂಕಿತರ ಸಂಖ್ಯೆಯನ್ನು 4.73 ಲಕ್ಷಕ್ಕೆ ತೆಗೆದುಕೊಂಡು ಹೋಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಸಾಂಕ್ರಾಮಿಕ ರೋಗದಿಂದ ಭಾರತ ನಾಲ್ಕನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿ ಮುಂದುವರಿದಿದ್ದರಿಂದ, ನಿನ್ನೆಯ ಒಟ್ಟು 16,922 ಹೊಸ ಸೋಂಕಿತರು ಸೇರಿ, ಈವರೆಗೆ ಸೋಂಕಿತರ ಸಂಖ್ಯೆಯು 4,73,105 ಕ್ಕೆ ತಲುಪಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 418 ಹೊಸ ಸಾವುಗಳು ಸಂಭವಿಸಿದ್ದು, ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಒಟ್ಟು 14,894 ಕ್ಕೆ ತಲುಪಿದೆ ಎಂದು ವರದಿಯಾಗಿದೆ.

ಪ್ರಸ್ತುತ ದೇಶದಲ್ಲಿ 1,86,514 ಸಕ್ರಿಯ ಪ್ರಕರಣಗಳು ಇದ್ದು, 2,71,696 ಸೋಂಕಿತರು ಗುಣಮುಖರಾಗಿದ್ದಾರೆ. ಕೋವಿಡ್-19 ನಿಂದ ಚೇತರಿಸಿಕೊಳ್ಳುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಭಾರತದಲ್ಲಿ ಚೇತರಿಕೆ ಪ್ರಮಾಣವು ಶೇ.57.42 ಕ್ಕೆ ಏರಿದೆ.

LEAVE A REPLY

Please enter your comment!
Please enter your name here