ಭಾರತದ ಆರ್ಥಿಕತೆ ಶೇ. 9.5 ಏರಿಕೆಯಾಗುವ ನಿರೀಕ್ಷೆ

0
144
Tap to know MORE!

ನವದೆಹಲಿ: ಕೊರೊನಾ ಲಾಕ್ಡೌನಿಂದಾಗಿ ಇಳಿಮುಖವಾಗಿರುವ ದೇಶದ ಆರ್ಥಿಕತೆ ಮುಂದಿನ ಹಣಕಾಸು ವರ್ಷದಲ್ಲಿ ತ್ವರಿತ ಬೆಳೆವಣಿಗೆ ಕಾಣುವ ಮೂಲಕ ಶೇ. 9.5ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವದ ಪ್ರಮುಖ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಲ್ಲಿ ಒಂದಾದ ಫಿಚ್ ರೇಟಿಂಗ್ಸ್ ಕಂಪೆನಿ ಹೇಳಿದೆ.

ಸಂಸ್ಥೆ ಪ್ರಕಟಿಸಿರುವ ಅಪಾಕ್ ಸಾವೇರಿನ್ ಕ್ರೆಡಿಟ್ ಓವರ್ ವ್ಯೂ ಎಂಬ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಹಿಂದೆ ನಿರೀಕ್ಷಿಸಿದ್ದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ಶೇ.5ರಷ್ಟು ಇಳಿಮುಖವಾಗಲಿದೆ.

ಮೇ 4 ರಿಂದ ಹೇರಿರುವ ಲಾಕ್ಡೌನ್ನಲ್ಲಿ ಸಡಿಲಿಕೆ ಬಂದಿರುವ ಕಾರಣ ಆರ್ಥಿಕ ಚಟುವಟಿಕೆಗಳು ಹಂತ ಹಂತವಾಗಿ ಆರಂಭಗೊಂಡಿದೆ. ಆರ್ಥಿಕತೆಯ ಮೇಲೆ ಸಂಭವಿಸಬಹುದಾಗಿದ್ದ ಸಂಕಷ್ಟ ಇದರಿಂದ ದೂರವಾಗಳಿದ್ದು , 2021-22ರಲ್ಲಿ ಹಣಕಾಸು ಪರಿಸ್ಥಿತಿ ಶೇ. 9.5ಕ್ಕೆ ಏರಿಕೆ ಕಾಣಲಿದೆ ಎಂದು ಕಂಪೆನಿ ತಿಳಿಸಿದೆ.

LEAVE A REPLY

Please enter your comment!
Please enter your name here