ಭಾರತದ ಹೊರಗಿನ ಮೊದಲ ಯೋಗ ವಿಶ್ವವಿದ್ಯಾಲಯ ಲಾಸ್ ಏಂಜಲಸ್ ನಲ್ಲಿ ಪ್ರಾರಂಭ

0
219
Tap to know MORE!

ಭಾರತದ ಹೊರಗಿನ ವಿಶ್ವದ ಮೊದಲ ಯೋಗ ವಿಶ್ವವಿದ್ಯಾಲಯವನ್ನು ಜೂನ್ 23, 2020 ರಂದು ಯುನೈಟೆಡ್ ಸ್ಟೇಟ್ ನ ಲಾಸ್ ಏಂಜಲೀಸ್ ನಗರದಲ್ಲಿ ಪ್ರಾರಂಭಿಸಲಾಯಿತು. ಯೋಗ ವಿಶ್ವವಿದ್ಯಾಲಯಕ್ಕೆ ಸ್ವಾಮಿ ವಿವೇಕಾನಂದರ ಹೆಸರಿಡಲಾಗಿದೆ. ವಿಶ್ವವಿದ್ಯಾಲಯವನ್ನು ಇನ್ನು ವಿವೇಕಾನಂದ ಯೋಗ ವಿಶ್ವವಿದ್ಯಾಲಯ ಎಂದು ಕರೆಯಲಾಗುವುದು. 6 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಯಿತು.

ವರ್ಚುವಲ್ ಲಾಂಚ್ ಈವೆಂಟ್ ಅನ್ನು ನ್ಯೂಯಾರ್ಕ್ ನಗರದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದಲ್ಲಿ ಆಯೋಜಿಸಲಾಗಿತ್ತು. ವಿ. ಮುರಲೀಧರನ್ (ಕೇಂದ್ರ ವಿದೇಶಾಂಗ ಸಚಿವ) ಮತ್ತು ಪಿ.ಪಿ.ಚೌಧರಿ (ವಿದೇಶಾಂಗ ಸ್ಥಾಯಿ ಸಮಿತಿಯ ಅಧ್ಯಕ್ಷರು) ಜಂಟಿಯಾಗಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯವನ್ನು ವರ್ಚುವಲ್ ಕಾರ್ಯಕ್ರಮದ ಸಂದರ್ಭದಲ್ಲಿ ಉದ್ಘಾಟಿಸಿದರು.

ಪ್ರಾಚೀನ ಸಾಂಪ್ರದಾಯಿಕ ಭಾರತೀಯ ಯೋಗಾಭ್ಯಾಸವನ್ನು ಆಧರಿಸಿದ ಕಾರ್ಯಕ್ರಮಗಳನ್ನು ವೈಜ್ಞಾನಿಕ ತತ್ವಗಳು ಮತ್ತು ಆಧುನಿಕ ಸಂಶೋಧನಾ ವಿಧಾನಗಳ ಸಂಯೋಜನೆಯೊಂದಿಗೆ ವಿಶ್ವವಿದ್ಯಾಲಯದಲ್ಲಿ ಕಲಿಸಲಾಗುತ್ತದೆ. ಯೋಗ ಆಧಾರಿತ ಉನ್ನತ ಶಿಕ್ಷಣ ಕಾರ್ಯಕ್ರಮಗಳನ್ನು ನೀಡಲು, ಕ್ಯಾಲಿಫೋರ್ನಿಯಾದ ಖಾಸಗಿ ಪೋಸ್ಟ್-ಸೆಕೆಂಡರಿ ಶಿಕ್ಷಣದ ಬ್ಯೂರೋದಿಂದ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು ಅನುಮೋದನೆ ಮತ್ತು ಅಧಿಕೃತ ಮಾನ್ಯತೆಯನ್ನು ನವೆಂಬರ್ 2019 ರಲ್ಲಿ ಸ್ವೀಕರಿಸಲಾಗಿತ್ತು.

LEAVE A REPLY

Please enter your comment!
Please enter your name here