ಭಾರತೀಯ ಸುದ್ದಿ ವಾಹಿನಿಗಳಿಗೆ ನಿಷೇಧ ಹೇರಿದ ನೇಪಾಳ!

0
184
Tap to know MORE!

ತನ್ನ ದೇಶದ ವಿರುದ್ಧದ ಪ್ರಚಾರಕ್ಕಾಗಿ ಡಿಡಿ ನ್ಯೂಸ್ ಹೊರತುಪಡಿಸಿ ಭಾರತದ ಎಲ್ಲಾ ಸುದ್ದಿ ವಾಹಿನಿಗಳನ್ನು ನೇಪಾಳ ನಿಷೇಧಿಸಿದೆ. ನೇಪಾಳದ ಕೇಬಲ್ ಆಪರೇಟರ್‌ಗಳು ಭಾರತೀಯ ಸುದ್ದಿ ವಾಹಿನಿಗಳಿಂದ ಬರುವ ಎಲ್ಲಾ ಸಿಗ್ನಲ್ ಗಳನ್ನೂ ನಿಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ನೇಪಾಳ ಸರ್ಕಾರದ ವಕ್ತಾರ ಯುವರಾಜ್ ಖತಿವಾಡಾ ಅವರು “ನೇಪಾಳಿಗಳ ಸಾರ್ವಭೌಮತ್ವ ಮತ್ತು ಸ್ವಾಭಿಮಾನವನ್ನು ಉಲ್ಲಂಘಿಸುವ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಾವು ಎಲ್ಲರಿಗೂ ವಿನಂತಿಸುತ್ತೇವೆ. ಇದರಲ್ಲಿ ನೆರೆಯ ರಾಷ್ಟ್ರಗಳ ಸುದ್ದಿ ವಾಹಿನಿಗಳೂ ಒಳಗೊಂಡಿದೆ. ಇದರಿಂದ ನಾವು ರಾಜಕೀಯ ಮತ್ತು ಕಾನೂನು ಪರಿಹಾರಗಳನ್ನು ಪಡೆಯಬಹುದು” ಎಂದು ಹೇಳಿದರು.

ಇದಕ್ಕೂ ಮೊದಲು, ನೇಪಾಳವು ತನ್ನ ರಾಷ್ಟ್ರದ ನಕ್ಷೆಯನ್ನು ತಿದ್ದುಪಡಿ ಮಾಡಿದೆ, ಅದರಲ್ಲಿ ಕೆಲವು ಭಾರತೀಯ ಭೂಭಾಗಗಳನ್ನು ಸೇರಿಸಿ, ನಕ್ಷೆಯನ್ನು ಪ್ರಕಟಿಸಿತ್ತು.

LEAVE A REPLY

Please enter your comment!
Please enter your name here