ಭಾರತ್ ಬಂದ್ | ಹಲವಾರು ಸಂಘಟನೆಗಳ ಬೆಂಬಲ | ನಾಳೆ ಏನಿರುತ್ತೆ, ಏನಿರಲ್ಲ?

0
130
Tap to know MORE!

ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆಯನ್ನ ತೀವ್ರಗೊಳಿಸಿದ್ದು, ನಾಳೆ ಭಾರತ್​ ಬಂದ್​ಗೆ ಕರೆ ನೀಡಿದ್ದಾರೆ. ವಿವಿಧ ರಾಜ್ಯಗಳ ರಾಜಕೀಯ ಪಕ್ಷಗಳು ಬಂದ್​ಗೆ ಬೆಂಬಲ ಘೋಷಿಸಿವೆ. ಕರ್ನಾಟಕದಲ್ಲಿ ಕಾಂಗ್ರೆಸ್​​, ರೈತಪರ ಮತ್ತು ಕನ್ನಡಪರ ಸಂಘಗಳು ಸೇರಿದಂತೆ ಹಲವಾರು ಸಂಘಟನೆಗಳು ಬಂದ್​ಗೆ ಬೆಂಬಲ ನೀಡಿವೆ. ಯಾವೆಲ್ಲಾ ಸಂಘಟನೆಗಳಿಂದ ಬಂದ್​ಗೆ ಬೆಂಬಲ ವ್ಯಕ್ತವಾಗಿದೆ. ನಾಳೆ ಯಾವೆಲ್ಲಾ ಸೇವೆ ಲಭ್ಯವಿರಲಿದೆ, ಏನೆಲ್ಲಾ ಸೇವೆ ಲಭ್ಯವಿರಲ್ಲ ಅನ್ನೋ ಕಂಪ್ಲೀಟ್​ ಡೀಟೇಲ್ಸ್​ ಇಲ್ಲಿದೆ.

ಭಾರತ ಬಂದ್​ಗೆ ಯಾವೆಲ್ಲ ಸಂಘಟನೆಯಿಂದ ಬೆಂಬಲ?

 • ರಾಜ್ಯ ರೈತ ಸಂಘಟನೆ
 • ರಾಜ್ಯ ರೈತ ಐಕ್ಯ ಹೋರಾಟ ಸಮಿತಿ
 • ರಾಜ್ಯ ಕಬ್ಬು ಬೆಳೆಗಾರರ ಸಂಘಟನೆ
 • ಹಸಿರು ಸೇನೆ
 • ದಿವಗಂತ ಪುಟ್ಟಣಯ್ಯ ರೈತ ಸಂಘ
 • ಕರ್ನಾಟಕ ಪ್ರಾಂತ ರೈತ ಸಂಘ
 • ಅಖಿಲ ಭಾರತ ಕಿಸಾನ್ ಸಭಾ
 • ರೈತ ಕೃಷಿ ಕಾರ್ಮಿಕರ ಸಂಘ
 • ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ
 • ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು
 • ಕನ್ನಡಪರ ಸಂಘಟನೆ- ವಾಟಾಳ್ ಬಣ
 • ಕಾರ್ಮಿಕ ‌ಸಂಘಟನೆ
 • ಓಲಾ- ಊಬರ್ ಟ್ಯಾಕ್ಸಿ ಅಸೋಸಿಯೇಷನ್‌
 • ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘಟನೆ
 • ಬ್ಯಾಂಕ್ ನೌಕರರ ಒಕ್ಕೂಟ, ಆಫೀಸರ್ಸ್ ಯೂನಿಯನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್

ಬಂದ್​​ಗೆ ಯಾರ ಬೆಂಬಲ ಇಲ್ಲ..?

 • ಹೋಟೆಲ್ ಮಾಲೀಕರ ಸಂಘ (ನೈತಿಕ ಬೆಂಬಲ)
 • ಪೆಟ್ರೋಲ್ ಹಾಗೂ ಡಿಸೇಲ್ ಅಸೋಸಿಯೇಷನ್ (ನೈತಿಕ ಬೆಂಬಲ)
 • ಬಾರ್ ಅ್ಯಂಡ್ ಪಬ್ ಮಾಲೀಕರ ಸಂಘದಿಂದಲೂ (ನೈತಿಕ ಬೆಂಬಲ)
 • ಕರವೇ ನಾರಯಣ ಗೌಡ ಹಾಗೂ ಪ್ರವೀಣ್ ಶೆಟ್ಟಿ ಬಣ (ತಟಸ್ಥ)
 • ಬಿಎಂಟಿಸಿ ಹಾಗೂ ಕೆಎಸ್​​ಆರ್​​ಟಿಸಿ ನೌಕರರಿಂದಲೂ (ತಟಸ್ಥ)

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ನಾಳೆ ಏನಿರುತ್ತೆ.. ಏನಿರಲ್ಲ?

 • ನಾಳೆ ಪೆಟ್ರೋಲ್ ಸಿಗುತ್ತೆ
 • ಬಾರ್ ಅ್ಯಂಡ್ ರೆಸ್ಟೋರೆಂಟ್, MRP ಲಿಕ್ಕರ್ ಶಾಪ್ ಓಪನ್ ಇರಲಿದೆ
 • ಹೊಟೇಲ್‌ಗಳೂ ಓಪನ್‌
 • ಬೀದಿ ಬದಿ ವ್ಯಾಪಾರ , ಬಹುವಾಗಿ ಇರಲ್ಲ. (ಪ್ರದೇಶ ಹಾಗೂ ವ್ಯಾಪಾರದ ರೀತಿಯ ಮೇಲೆ ಅವಲಂಬನೆ)
 • ಓಲಾ-ಊಬರ್ ಟ್ಯಾಕ್ಸಿ ಸೇವೆ (ಚಾಲಕರ ಸ್ವ-ಇಚ್ಛೆ)
 • ಬಿಎಂಟಿಸಿ – ಕೆಎಸ್‌ಆರ್‌ಟಿ‌ಸಿ ಬಸ್ ಸಂಚಾರ ಇರುತ್ತೆ (ಕೆಲವೊಂದು ಕಡೆ ಸಂಚಾರ ಮಾರ್ಗ ಬದಲಾಗುವ ಸಾಧ್ಯತೆ)
 • ಬ್ಯಾಂಕ್ ಬಂದ್ ಇರಲ್ಲ. ಆದರೆ, ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ

ಒಟ್ಟಿನಲ್ಲಿ, ಕೋವಿಡ್ ಲಾಕ್‌ಡೌನ್ ನಿಂದಲೇ ಬೇಸತ್ತಿರುವವರಿಗೆ ಬಂದ್ ಮಾಡುವ ಯೋಚನೆಯಲ್ಲಿಲ್ಲ. ಆದರೂ ರೈತರ ಹೋರಾಟಕ್ಕೆ ಹಲವರು ನೈತಿಕ ಬೆಂಬಲ ಸೂಚಿಸಿದ್ದು, ಆರ್ಥಿಕ ಚಟುವಟಿಕೆಗಳು ಎಂದಿನಂತೆ ನಡೆಯುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here