ನಾಳೆ ಭಾರತ್ ಬಂದ್ | ಕರಾವಳಿಯಲ್ಲಿ ಎಂದಿನಂತೆ ಜನಜೀವನ?

0
146
Tap to know MORE!

ಮಣಿಪಾಲ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಮಂಗಳವಾರ ( ಡಿ.8) ರಂದು ಭಾರತ್ ಬಂದ್ ಗೆ ಕರೆ ನೀಡಿದೆ. ರಾಜ್ಯದಲ್ಲೂ ರೈತ ಸಂಘ ಮತ್ತು ಹಸಿರು ಸೇನೆ ಬಂದ್ ಗೆ ಬೆಂಬಲ ಸೂಚಿಸಿದೆ.

ಅಖಿಲ ಭಾರತ ರೈತರ ಸಂಘರ್ಷ ಸಮನ್ವಯ ಸಮಿತಿಯು ಕರೆ ನೀಡಿರುವ ಈ ಭಾರತ್‌ ಬಂದ್‌ ಗೆ ಬೆಂಬಲವಾಗಿ ದಕ್ಷಿಣ ಕನ್ನಡ ಜಿಲ್ಲೆಯ ರೈತ ದಲಿತ ಕಾರ್ಮಿಕ ಜನಪರ ಚಳವಳಿಗಳ ಒಕ್ಕೂಟವು ಮಂಗಳವಾರ ಬೆಳಗ್ಗೆ 10ಕ್ಕೆ ಮಂಗಳೂರಿನ ನಂತೂರು ಸರ್ಕಲ್‌ನಲ್ಲಿ ರಾಸ್ತಾ ರೋಕೊ ಚಳವಳಿ ನಡೆಸುವ ಕುರಿತು ತೀರ್ಮಾನಿಸಿದೆ.

ಇದನ್ನೂ ಓದಿ: ಪೆಟ್ರೋಲ್ ದರ ಮತ್ತಷ್ಟು ಏರಿಕೆ | ಎರಡು ವರ್ಷಗಳಲ್ಲೇ ಗರಿಷ್ಠ |

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಖಾಸಗಿ ಬಸ್ ಸಂಚಾರ ಎಂದಿನಂತೆ ಇರುವ ಸಾಧ್ಯತೆ ಹೆಚ್ಚಿದೆ. ಬಸ್ ಸಂಚಾರ ಸ್ಥಗಿತ ಮಾಡುವ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರ ಮಾಡಲಾಗಿಲ್ಲ ಎಂದು ಸಂಘಟನೆಗಳು ತಿಳಿಸಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಮಂಗಳವಾರದ ಭಾರತ್ ಬಂದ್ ಗೆ ದೇಶದ 40 ರೈತ ಸಂಘಟನೆಗಳು ಕರೆ ನೀಡಿದೆ. ಕಾಂಗ್ರೆಸ್, ಟಿಎಂಸಿ ಸೇರಿ ಎಂಟು ಪ್ರಮುಖ ಪಕ್ಷಗಳು ಕೂಡಾ ಬೆಂಬಲ ಸೂಚಿಸಿದೆ.

ರಾಜ್ಯದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಬಂದ್ ಗೆ ಕಾರ್ಮಿಕ ಸಂಘಟನೆಗಳ ಸಹಿತ ಹಲವು ಸಂಘಟನೆಗಳು ಬೆಂಬಲ ನೀಡಿದ್ದು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯಲಿದೆ

LEAVE A REPLY

Please enter your comment!
Please enter your name here