ಕೇಂದ್ರದ ಜೊತೆ ಮಾತುಕತೆ ವಿಫಲ | ಡಿ.8 ರಂದು ಭಾರತ್ ಬಂದ್‌ಗೆ ಕರೆ ನೀಡಿದ ರೈತ ಸಂಘಟನೆಗಳು

0
198
Tap to know MORE!

ನವದೆಹಲಿ, ಡಿ.4 : ಕೃಷಿ ವಿಧೇಯಕ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಜೊತೆ ಕೇಂದ್ರ ಸರ್ಕಾರದ ಸತತ ಮಾತುಕತೆ ವಿಫಲವಾಗಿದೆ. ಪ್ರತಿಭಟನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸಮಯ ಬಂದಿದೆ ಎಂದು ರೈತ ಸಮೂಹ ನಿರ್ಧರಿಸಿದ್ದು, ಡಿಸೆಂಬರ್ 8ರಂದು ಭಾರತ್ ಬಂದ್‌ಗೆ ಕರೆ ನೀಡಿದೆ.

“ನಿನ್ನೆ ಕೇಂದ್ರ ಸರ್ಕಾರದ ಜೊತೆ ನಡೆದ ಸಭೆಯಲ್ಲಿ ಕೃಷಿ ವಿಧೇಯಕಗಳನ್ನು ಹಿಂಪಡೆಯುವಂತೆ ಆಗ್ರಹಿಸಲಾಯಿತು. ಮಾತುಕತೆ ಫಲಪ್ರದವಾಗದ ಕಾರಣ, ನಮ್ಮ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದು, ಡಿಸೆಂಬರ್ 8ರಂದು ಭಾರತ್ ಬಂದ್ ನಡೆಸಲು ಕರೆ ನೀಡಲಾಗಿದೆ” ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು-ಲಖೋವಾಲ್) ಪ್ರಧಾನ ಕಾರ್ಯದರ್ಶಿ ಎಚ್.ಎಸ್ ಲಖೋವಾಲ್ ಅವರು ಸಿಂಘು ಗಡಿಯಲ್ಲಿ ಹೇಳಿದರು.

ಇದನ್ನೂ ಓದಿ: ಡಿಸೆಂಬರ್ 31ರಂದು ರಜನಿಕಾಂತ್ ರಾಜಕೀಯ ಪಕ್ಷದ ಘೋಷಣೆ

ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರೈತ ಸಂಘಟನೆಗಳ ಒಕ್ಕೂಟದ ಮುಖಂಡ ರಾಖೇಶ್ ಟಿಕಾಯತ್ “ನಮ್ಮ ಒತ್ತಾಯ ಇರುವುದು ಇಡೀ ಕಾಯಿದೆಗಳನ್ನು ರದ್ದುಪಡಿಸಬೇಕೆಂದು. ಇಲ್ಲಿ ಅನೇಕ ವಿಷಯಗಳನ್ನು ಚರ್ಚಿಸಿದ್ದೇವೆ. ಆದರೆ ಸರ್ಕಾರ ಎಂ.ಎಸ್.ಪಿ ಹಾಗೂ ಈಗಿರುವ ಕಾಯಿದೆಗಳಿಗೆ ತಿದ್ದುಪಡಿ ತರುವ ಮಾತುಗಳನ್ನಾಡುತ್ತಿದೆ” ಎಂದಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ನವೆಂಬರ್.26ರಿಂದ ರೈತರ ಪ್ರತಿಭಟನೆ ಆರಂಭಗೊಂಡಿದ್ದು, ಇದುವರೆಗೂ ನಡೆಸಿದ ಮೂರು ಸಂಧಾನ ಸಭೆಗಳು ವಿಫಲವಾಗಿವೆ. ಡಿಸೆಂಬರ್ 5ರಂದು ಮತ್ತೊಂದು ಸುತ್ತಿನ ಮಾತುಕತೆ ಕರೆಯಲಾಗಿದೆ.

LEAVE A REPLY

Please enter your comment!
Please enter your name here