ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ‘ಕೊವ್ಯಾಕ್ಸಿನ್’ ಲಸಿಕೆಯ ಪ್ರಯೋಗಗಳಿಗೆ ಅನುಮತಿ

1
216
Tap to know MORE!

ಐಸಿಎಂಆರ್ ಮತ್ತು ಎನ್ಐವಿ ಸಹಯೋಗದೊಂದಿಗೆ ನಗರದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ದೇಶದ ಮೊದಲ ಸ್ಥಳೀಯ COVID-19 ಲಸಿಕೆ ‘ಕೋವಾಕ್ಸಿನ, ಮಾನವನ ಮೇಲೆ ಪ್ರಾಯೋಗಿಕ ಪರೀಕ್ಷೆಗಳಿಗೆ ಭಾರತದ ಡ್ರಗ್ ಕಂಟ್ರೋಲರ್ ಜನರಲ್ ರವರಿಂದ ಅನುಮೋದನೆ ಪಡೆದಿದೆ ಎಂದು ಕಂಪನಿಯು ಸೋಮವಾರ ತಿಳಿಸಿದೆ.

ಪೂರ್ವ-ಕ್ಲಿನಿಕಲ್ ಅಧ್ಯಯನಗಳು, ಸುರಕ್ಷತೆ ಮತ್ತು ರೋಗನಿರೋಧಕ ಪ್ರತಿಕ್ರಿಯೆಯನ್ನು ನಡೆಸಿದ ಬಳಿಕ ಈ ಲಸಿಕೆಯನ್ನು ಅನುಮೋದಿಸಲಾಯಿತು. SARS-CoV-2 ಗಾಗಿ ಈ ಲಸಿಕೆಯ ಹಂತ I ಮತ್ತು ಹಂತ II ಕ್ಲಿನಿಕಲ್ ಪ್ರಯೋಗಗಳು ಮುಂದಿನ ತಿಂಗಳು ದೇಶಾದ್ಯಂತ ಪ್ರಾರಂಭವಾಗಲಿವೆ.

ಕೋವಿಡ್ -19 ಗಾಗಿ ಭಾರತದ ಮೊದಲ ಸ್ಥಳೀಯ ಲಸಿಕೆ ‘ಕೋವ್ಯಾಕ್ಸಿನ್’ ಅನ್ನು ಘೋಷಿಸಲು ನಾವು ಹೆಮ್ಮೆಪಡುತ್ತೇವೆ. ಐಸಿಎಂಆರ್ ಮತ್ತು ಎನ್‌ಐವಿ ಸಹಯೋಗವು ಪ್ರಮುಖ ಪಾತ್ರ ವಹಿಸಿದೆ

ಕೃಷ್ಣ ಎಲಾ,
ಸಿಎಂಡಿ, ಭಾರತ್ ಬಯೋಟೆಕ್‌

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಸಹಯೋಗವು, ಲಸಿಕೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

1 COMMENT

LEAVE A REPLY

Please enter your comment!
Please enter your name here