ಭಾರತದ ಹೊಸ ಐಟಿ ನಿಯಮಗಳ ಅನುಸಾರ 3 ಕೋಟಿಗೂ ಅಧಿಕ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ ಫೇಸ್ಬುಕ್!

0
99
Tap to know MORE!

ಹೊಸದಿಲ್ಲಿ: ಭಾರತದಲ್ಲಿ ನೂತನ ಐಟಿ ನಿಯಮಗಳು ಜಾರಿಗೆ ಬಂದ ಬಳಿಕ ತನ್ನ ಮೊದಲ ಮಾಸಿಕ ಅನುಸರಣೆ ವರದಿ ಸಲ್ಲಿಸಿರುವ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್‌ಬುಕ್, ಮೇ 15 ರಿಂದ ಜೂನ್ 15ರ ಅವಧಿಯಲ್ಲಿ 10 ಉಲ್ಲಂಘನಾ ವಿಭಾಗಗಳಿಂದ 30 ಮಿಲಿಯನ್‌ಗೂ ಅಧಿಕ ಕಂಟೆಂಟ್‌ಗಳನ್ನು ತೆಗದುಹಾಕಿರುವುದಾಗಿ ತಿಳಿಸಿದೆ.

ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂ ಕೂಡ 9 ವಿಭಾಗಗಳಲ್ಲಿನ ಪೋಸ್ಟ್‌ಗಳನ್ನು ಪರಿಶೀಲಿಸಿದ್ದು, ಅವುಗಳಲ್ಲಿ 20 ಮಿಲಿಯನ್‌ಗೂ ಅಧಿಕ ಅಂಶಗಳ ವಿರುದ್ಧ ಕ್ರಮ ತೆಗೆದುಕೊಂಡಿದೆ.

ಹೊಸ ಐಟಿ ನಿಯಮ ಅನುಸರಿಸಲು ವಿಫಲ | ಭಾರತದಲ್ಲಿ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡ ಟ್ವಿಟ್ಟರ್

5 ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಬೃಹತ್ ಡಿಜಿಟಲ್ ವೇದಿಕೆಗಳು (ಸಾಮಾಜಿಕ ಮಾಧ್ಯಮ ಸಂಸ್ಥೆಗಳು) ಪ್ರತಿ ತಿಂಗಳೂ ಅವಧಿಗನುಗುಣವಾಗಿ ಅನುಸರಣೆ ವರದಿಯನ್ನು ಸಲ್ಲಿಸಬೇಕು. ಇದರಲ್ಲಿ ತಮಗೆ ಬಂದ ದೂರುಗಳು ಹಾಗೂ ಅವುಗಳ ಕುರಿತು ತೆಗೆದುಕೊಂಡ ಕ್ರಮಗಳನ್ನು ಸಹ ಉಲ್ಲೇಖಿಸಬೇಕು ಎಂದು ನೂತನ ಐಟಿ ನಿಯಮಗಳು ಸೂಚಿಸಿವೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಹಲವು ವರ್ಷಗಳಿಂದಲೂ ಬಳಕೆದಾರರ ಸುರಕ್ಷತೆ ಮತ್ತು ಆನ್‌ಲೈನ್ ಸುರಕ್ಷತೆ ಹಾಗೂ ಅವರು ತನ್ನ ವೇದಿಕೆಯಲ್ಲಿ ಮುಕ್ತವಾಗಿ ಅಭಿವ್ಯಕ್ತಿಸಿಕೊಳ್ಳಲು ಅವಕಾಶ ನೀಡುವಂತೆ ಫೇಸ್‌ಬುಕ್ ನಿರಂತರವಾಗಿ ತಂತ್ರಜ್ಞಾನ, ಜನರು ಮತ್ತು ಪ್ರಕ್ರಿಯೆಗಳ ಮೇಲೆ ಹೂಡಿಕೆ ಮಾಡುತ್ತಿದೆ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.

‘ನಾವು ಕೃತಕ ಬುದ್ಧಿಮತ್ತೆ, ನಮ್ಮ ಸಮುದಾಯದಿಂದ ಬರುವ ವರದಿಗಳು ಹಾಗೂ ನಮ್ಮ ನೀತಿಗಳ ವಿರುದ್ಧವಿರುವ ವಿಷಯಗಳನ್ನು ಗುರುತಿಸುವ ಹಾಗೂ ಪರಾಮರ್ಶಿಸುವ ನಮ್ಮ ತಂಡಗಳು ನಡೆಸುವ ಪರಿಶೀಲನೆಗಳ ಸಂಯೋಜನೆಯನ್ನು ಬಳಸುತ್ತಿದ್ದೇವೆ. ಈ ವರದಿಯಲ್ಲಿ ನೀಡಿರುವಂತೆ ಪಾರದರ್ಶಕತೆ ಹೆಚ್ಚಿಸುವ ಪ್ರಯತ್ನ ನಿರ್ಮಾಣ ಮತ್ತು ಹೆಚ್ಚಿನ ಮಾಹಿತಿಗಳನ್ನು ಒದಗಿಸುವುದನ್ನು ಮುಂದುವರಿಸಲಿದ್ದೇವೆ’ ಎಂದಿದ್ದಾರೆ.

ಜುಲೈ 15ರಂದು ಸಲ್ಲಿಸಲಾಗುವ ತನ್ನ ಎರಡನೆಯ ವರದಿಯಲ್ಲಿ ಬಳಕೆದಾರರಿಂದ ಬಂದ ದೂರುಗಳು ಹಾಗೂ ತೆಗೆದುಕೊಂಡ ಕ್ರಮಗಳ ಕುರಿತು ವಿವರ ನೀಡುವುದಾಗಿ ಫೇಸ್‌ಬುಕ್ ತಿಳಿಸಿದೆ.
ಗೂಗಲ್, ತಾನು ಗೂಗಲ್ ಹಾಗೂ ಯೂಟ್ಯೂಬ್ ವೇದಿಕೆಗಳಿಂದ 26,762 ದೂರುಗಳನ್ನು ಸ್ವೀಕರಿಸಿದ್ದು, ಒಟ್ಟು 59,350 ವಿಷಯಗಳನ್ನು ತೆಗೆದುಹಾಕಿದ್ದಾಗಿ ತಿಳಿಸಿದೆ. ಕೂ ಆಪ್‌ನಲ್ಲಿ ಜೂನ್ ತಿಂಗಳಲ್ಲಿ 5,502 ಪೋಸ್ಟ್‌ಗಳ ವಿರುದ್ಧ ಬಳಕೆದಾರರು ರಿಪೋರ್ಟ್ ಮಾಡಿದ್ದು, ಇನ್ನು 54,235 ವಿಷಯಗಳನ್ನು ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here