ಭಾರತ ಮತ್ತು ಚೀನಾದ ಶಾಂತಿಗಾಗಿ ನಾನು ಎಲ್ಲವನ್ನೂ ಮಾಡುತ್ತೇನೆ: ಟ್ರಂಪ್

0
251
Tap to know MORE!

ಭಾರತ ಮತ್ತು ಚೀನಾದ ಜನರ ಶಾಂತಿ ಕಾಪಾಡಲು, ನನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ನಾನು ಮಾಡಲು ಬಯಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ಕಳೆದ ಕೆಲವು ವಾರಗಳಿಂದ, ಟ್ರಂಪ್ ಆಡಳಿತವು ಚೀನಾ ವಿರುದ್ಧವಾಗಿ ಭಾರತವನ್ನು ಬೆಂಬಲಿಸುತ್ತಿದೆ.

“ಅವರು (ಟ್ರಂಪ್) ನಾನು ಭಾರತದ ಜನರನ್ನು ಪ್ರೀತಿಸುತ್ತೇನೆ ಮತ್ತು ಚೀನಾದ ಜನರನ್ನೂ ಪ್ರೀತಿಸುತ್ತೇನೆ. ಜನರ ಶಾಂತಿ ಕಾಪಾಡಲು ನಾನು ಎಲ್ಲವನ್ನು ಮಾಡಲು ಬಯಸುತ್ತೇನೆ ಎಂದಿದ್ದಾರೆ” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚೆಗೆ ಪೂರ್ವ ಲಡಾಕ್‌ನಲ್ಲಿ ಭಾರತ ಮತ್ತು ಚೀನಾ ನಡುವೆ LAC ಯಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿತ್ತು.
ನಿನ್ನೆಯಷ್ಟೇ, ಶ್ವೇತಭವನದ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ ಭಾರತವನ್ನು ‘ಉತ್ತಮ ಮಿತ್ರ’ ಎಂದು ಬಣ್ಣಿಸಿದರು ಮತ್ತು ಅಧ್ಯಕ್ಷ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರ ಉತ್ತಮ ಸ್ನೇಹಿತ ಎಂದು ಹೇಳಿದ್ದರು.

LEAVE A REPLY

Please enter your comment!
Please enter your name here