ಕೊರೋನಾ ಕಪಿಮುಷ್ಠಿಯಿಂದ ಹೊರಬಂದು ಭಾರತವನ್ನು ವಿಶ್ವಗುರು ಮಾಡಬೇಕು: ಶ್ಯಾಮ್‌ಪ್ರಸಾದ್

0
1551
Tap to know MORE!

ಕರ್ನಾಟಕ ರಾಜ್ಯ ಪ್ರಶಸ್ತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ), ಹಳೆಯಂಗಡಿ ಇದರ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಭಾನುವಾರ ಯುವಕ ಮಂಡಲದ ಪ್ರಾಂಗಣದಲ್ಲಿ, ಕೋರೋನ ಭೀತಿಯಿಂದ, ಸರಕಾರದ ಸುತ್ತೋಲೆಯ ಅನುಸಾರ ಸರಳವಾಗಿ ಜರುಗಿತು.

ಧ್ವಜಾರೋಹಣವನ್ನು ಪಡುಪಣಂಬೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇದರ ಉಪಾಧ್ಯಕ್ಷ ಶ್ಯಾಮ್‌ಪ್ರಸಾದ್ ಇವರು ನೆರವೇರಿಸಿದರು. 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ, ಸ್ವಾತಂತ್ರ್ಯ ದಿನಾಚರಣೆ ಹಾಗೂ ತ್ರಿವರ್ಣ ಧ್ವಜದ ಮಹತ್ವ ಮತ್ತು ಸಂದೇಶವನ್ನು ತಿಳಿಸಿದರು. ಕೇಸರಿ, ಬಿಳಿ, ಹಸಿರು ಬಣ್ಣವು ತ್ಯಾಗ, ಶಾಂತಿ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಪ್ರಸ್ತುತ ಕೊರೋನಾ ಕಪಿಮುಷ್ಠಿಯಲ್ಲಿ ಜೀವಿಸುತ್ತಿರುವ ನಾವು, ಅದರಿಂದ ಹೊರಬಂದು ಭಾರತವನ್ನು ವಿಶ್ವಗುರು ಮಾಡಬೇಕು ಎಂದು ಧ್ವಜಾರೋಹಣ ನೆರವೇರಿಸಿ ಶ್ರೀ ಶ್ಯಾಮ್‌ಪ್ರಸಾದ್ ಮಾತನಾಡಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾಶಿವ ಅಂಚನ್ ಚಿಲಿಂಬಿ, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಶ್ರೀ ಸ್ಟ್ಯಾನಿ ಡೀ ಕೋಸ್ತಾ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುಧಾಕರ್ ಅಮೀನ್, ಯುವತಿ ಮಂಡಲದ ಉಪಾಧ್ಯಕ್ಷರಾದ ಕುಮಾರಿ ರಶ್ವಿತಾ ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಅಶ್ರಫ್ ಉಪಸ್ಥಿತರಿದ್ದರು

ಹಳೆಯಂಗಡಿ: ಮಲೇರಿಯ, ಡೆಂಗ್ಯೂ, ಚಿಕನ್ ಗುನ್ಯ ಜ್ವರ ಹಾಗೂ ಇಲಿ ಜ್ವರ ತಡೆಗಟ್ಟುವ ಬಗ್ಗೆ ಕರಪತ್ರ ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮ

ಮಾಸ್ಟರ್ ನಿತ್ಯಾನಂದ ಧ್ವಜವಂದನೆ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಮಂಡಲದ ಸದಸ್ಯರಾದ ಸ್ಟ್ಯಾನಿ ಡಿ’ಕೋಸ್ತಾ, ನಾಗೇಶ್ ಟಿ.ಜಿ, ಹಿಮಕರ ಕೋಟ್ಯಾನ್, ಕಿರಣ್ ರಾಜ್, ಪ್ರದೀಪ್ ಆಚಾರ್ಯ, ಸುದರ್ಶನ್, ಚೇತನ್ ಪಾಂಗಳ ಹಾಗೂ ಯುವತಿ ಮಂಡಲದ ರಶ್ಮಿ ಕನಡ ಇವರು ಯುವಕ ಮಂಡಲದಲ್ಲಿ ಬ್ಯಾಡ್ಮಿಂಟನ್ ಸ್ಟ್ಯಾಂಡ್ ಅನ್ನು ಕೊಡುಗೆಯಾಗಿ ನೀಡಿದರು. ಮಂಡಲದ ಪರವಾಗಿ, ಯುವಕ ಮಂಡಲದ ಅಧ್ಯಕ್ಷರಾದ ಯತೀಶ್ ಕೋಟ್ಯಾನ್ ಇವರಿಗೆ ಸ್ಟ್ಯಾಂಡ್‌ ಅನ್ನು ಹಸ್ತಾಂತರಿಸಿದರು*

ಟ್ರಸ್ಟಿಗಳು, ಯುವಕ, ಯುವತಿ ಮತ್ತು ಮಹಿಳಾ ಮಂಡಲದ ಹಿರಿಯ, ಕಿರಿಯ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು. ಕೋರೋನ ನಿಮಿತ್ತ ಸರಳ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಅಧ್ಯಕ್ಷ ಶ್ರೀ ಯತೀಶ್ ಕೋಟ್ಯಾನ್ ಸ್ವಾಗತಿಸಿದರು ಹಾಗೂ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಇಂದುಧರ ವಂದನಾರ್ಪಣೆಗೈದರು. ನಾಡಗೀತೆ, ಧ್ವಜ ಗೀತೆ, ಹಾಗೂ ರಾಷ್ಟ್ರ ಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ಸರಳವಾಗಿ ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here