ಭೂಕಬಳಿಕೆ ಆರೋಪ ಹೊತ್ತಿದ್ದ ತೆಲಂಗಾಣದ ಮಾಜಿ ಸಚಿವ ಈಟಲ ರಾಜೇಂದರ್ ಬಿಜೆಪಿ ಸೇರ್ಪಡೆ

0
140
Tap to know MORE!

ನವದೆಹಲಿ: ತೆಲಂಗಾಣದ ಮಾಜಿ ಸಚಿವ ಈಟಲ ರಾಜೇಂದರ್‌ ಅವರು ಸೋಮವಾರ ಬಿಜೆಪಿ ಸೇರಿದ್ದಾರೆ. ರಾಜೇಂದ್ರ ಅವರು ಕೆಲ ದಿನಗಳ ಹಿಂದೆ ಹುಜುರಾಬಾದ್‌ ಶಾಸಕ ಸ್ಥಾನಕ್ಕೆ ಹಾಗೂ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌)  ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು.

ದ.ಕ ಜಿಲ್ಲೆಯ 17 ಗ್ರಾಮ ಪಂಚಾಯತ್‌ಗಳು ಸೀಲ್‌ಡೌನ್!

ಟಿಆರ್‌ಎಸ್‌ನಲ್ಲಿ ಹಿರಿಯ ನಾಯಕರಾಗಿದ್ದ ರಾಜೇಂದರ್‌ ಅವರು, ಕೆ. ಚಂದ್ರಶೇಖರ್‌ ಅವರ ಸರ್ಕಾರದಲ್ಲಿ ಸಚಿವರಾಗಿ ಹಣಕಾಸು, ಆರೋಗ್ಯ ಸೇರಿದಂತೆ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದಿದ್ದರಿಂದ ಸಂಪುಟದಿಂದ ಅವರನ್ನು ಕೈಬಿಡಲಾಗಿತ್ತು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸೋಮವಾರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಸಮ್ಮುಖದಲ್ಲಿ ರಾಜೇಂದರ್‌ ಬಿಜೆಪಿಗೆ ಸೇರ್ಪಡೆಯಾದರು.

LEAVE A REPLY

Please enter your comment!
Please enter your name here